ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

7

ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

Published:
Updated:
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕದ 3ನೇ ಬಾರಿ ಸಾನ್ನಿಧ್ಯ ವಹಿಸಿರುವ ವರ್ಧಮಾನ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಪಟ್ಟಣದ ಹೊರ ವಲಯದ ತ್ಯಾಗಿ ನಗರಕ್ಕೆ ಶುಕ್ರವಾರ ಮಂಗಲ ಪ್ರವೇಶ ಮಾಡಿದರು.

ಈವರೆಗೂ ಪಟ್ಟಣದ ಮಠದ ಬಳಿ ಇರುವ ಹಳೆ ಧರ್ಮ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದರು. ಜಿಲ್ಲಾಡಳಿತ, ಮುನಿಗಳು, ಮಾತಾಜಿಯವರ ವಾಸ್ತವ್ಯಕ್ಕೆ ಮತ್ತು ಚೌಕಕ್ಕೆ (ಆಹಾರ ತಯಾರಿಸುವ ಸ್ಥಳ) ತಾತ್ಕಾಲಿಕವಾಗಿ ತಲಾ 500 ಕೊಠಡಿ ನಿರ್ಮಿಸಿದೆ.

ತ್ಯಾಗಿ ನಗರ ಪ್ರವೇಶದ ಕಾರ್ಯ ಕ್ರಮಕ್ಕೂ ಮುನ್ನ ಮಠದ ಬಳಿ ವರ್ಧಮಾನ ಸಾಗರ ಮಹಾರಾಜರ ಮತ್ತು ಸಂಘಸ್ಥ ತ್ಯಾಗಿಗಳ ಪಾದ ಪೂಜೆ ನೆರವೇರಿಸಲಾಯಿತು. ನಂತರ ಮಂಗಳ ವಾದ್ಯ, ಮೈಸೂರು ಬ್ಯಾಂಡ್‌ಸೆಟ್‌, ಕಳಶ ಹೊತ್ತ ಮಹಿಳೆಯರು, ಧರ್ಮ ಧ್ವಜ ಹಿಡಿದ ಬಾಲಕರು ಅಪಾರ ಭಕ್ತ ಸಮೂಹ ಮೆರವಣಿಗೆಯೊಂದಿಗೆ ತ್ಯಾಗಿ ನಗರ ಪ್ರವೇಶ ಮಾಡಿದ ತ್ಯಾಗಿ ವೃಂದಕ್ಕೆ ಪುಷ್ಪ ಅರ್ಪಿಸಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು.

ವಿಶೇಷಾಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಶ್ರೀಪಾಲ್‌ ಗಂಗ್‌ವಾಲ್‌, ರಾಮ್‌ ದಾಸ್‌, ಪ್ರತಿಷ್ಠಾಚಾರ್ಯ ಎಸ್‌.ಡಿ.ನಂದಕುಮಾರ್‌, ಮಹಿಳಾ ಸಮಾಜದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry