3

ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

Published:
Updated:
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

ಬಳ್ಳಾರಿ: ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಇಲ್ಲಿನ ನಕ್ಷತ್ರ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರಿಗೆ ದಲಿತ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ತೋರಿದರು.

ಪೊಲೀಸರು ಲಾಠಿಗಳನ್ನು ಅಡ್ಡ ಹಿಡಿದು, ಪ್ರತಿಭಟನಾಕಾರರ ಗುಂಪು ಸಚಿವರತ್ತ ಬರದಂತೆ ತಡೆದು, ಗುಂಪು ಚದುರಿಸಿದರು. ರಸ್ತೆಯ ಒಂದು ಬದಿ ಗುಂಪನ್ನು ತಡೆ ಹಿಡಿಯಲಾಗಿತ್ತು. ಗುಂಪು ಅಲ್ಲಿಂದಲೇ ಸಚಿವರತ್ತ ಕಪ್ಪು ಬಾವುಟ ಪ್ರದರ್ಶಿಸಿತು. ರಸ್ತೆಯ ಇನ್ನೊಂದು ಬದಿಯಿಂದ ಸಚಿವರು ಅಲ್ಲಿಂದ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು.

ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗೆ 1,500 ಪೊಲೀಸರನ್ನು ನಿಯೋಜಿಸಲಾಗಿತ್ತು.

ಶನಿವಾರ ಬೆಳಿಗ್ಗೆ ಅನಂತಕುಮಾರ ಹೆಗಡೆ ಅವರು ಇಲ್ಲಿಗೆ ಬಂದ ವೇಳೆ ದಲಿತ ಸಂಘಟನೆಗಳ ಕಾರ್ಯಕರ್ತರು ಸಂವಿಧಾನ ಬದಲಾಯಿಸುವ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ನಗರದ ಪ್ರವಾಸಿ ಮಂದಿರದ ಬಳಿ ಹೆಗಡೆ ಅವರ ಕಾರಿಗೆ ಮುತ್ತಿಗೆ ಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry