ಉತ್ತರ ಪ್ರದೇಶ: ಗರ್ಭಿಣಿ ಮೇಲೆ ಅಪರಿಚಿತರಿಂದ ಸಾಮೂಹಿಕ ಅತ್ಯಾಚಾರ

7

ಉತ್ತರ ಪ್ರದೇಶ: ಗರ್ಭಿಣಿ ಮೇಲೆ ಅಪರಿಚಿತರಿಂದ ಸಾಮೂಹಿಕ ಅತ್ಯಾಚಾರ

Published:
Updated:
ಉತ್ತರ ಪ್ರದೇಶ: ಗರ್ಭಿಣಿ ಮೇಲೆ ಅಪರಿಚಿತರಿಂದ ಸಾಮೂಹಿಕ ಅತ್ಯಾಚಾರ

ಬದೌನ್: ನಸುಕಿನ ವೇಳೆ ಮನೆಯಿಂದ ಹೊರಗೆ ಬಂದ ಗರ್ಭಿಣಿ ಮೇಲೆ ಅಪರಿಚಿತರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಛೂಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮನೆಯಿಂದ ಹೊರಗೆ ಹೋದ ಮಹಿಳೆ ಸುಮಾರು ಹೊತ್ತಿನ ಬಳಿಕವೂ ಹಿಂದಿರುಗದಿದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಬಳಿಕ, ಮನೆಯ ಪಕ್ಕದ ಕಾಡಿನಲ್ಲಿ ಕೈ, ಕಾಲುಗಳನ್ನು ಹಾಗೂ ಬಾಯಿಯನ್ನು ಬಟ್ಟೆಯಿಂದ ಕಟ್ಟಿಹಾಕಿದ್ದ ಹಾಗೂ ಪ್ರಜ್ಞಾಹೀನಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಪ್ರಕಾಶ್ ಹೇಳಿದ್ದಾರೆ.

ಈ ಬಗ್ಗೆ ಕುಟುಂಬಸ್ಥರು ದೂರು ದಾಖಲಿಸಿದ್ದು, ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆ ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಬರೇಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry