ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಮೌಲ್ಯ ಜಾಗೃತಗೊಳಿಸಿದ ಸಾಧಕ

Last Updated 20 ಜನವರಿ 2018, 10:19 IST
ಅಕ್ಷರ ಗಾತ್ರ

ಕೊಪ್ಪಳ: ಸಮಾಜದಲ್ಲಿನ ಅಂಕು-ಡೊಂಕು ವ್ಯವಸ್ಥೆ ತಿದ್ದುವಂತಹ ಪ್ರಯತ್ನ ಮಾಡಿದ ವೇಮನ ಜನರಲ್ಲಿ ಜೀವನ ಮೌಲ್ಯ ಜಾಗೃತಗೊಳಿಸಿದ ಸಾಧಕ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಕಿನ್ನಾಳ ರಸ್ತೆಯ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೇಮನ ತಮ್ಮ ಸಮಕಾಲೀನ ಸಮಾಜದಲ್ಲಿ ಇದ್ದ ಮೂಢನಂಬಿಕೆ, ದುರಾಚಾರ, ಧರ್ಮಾಚಾರ, ಅನೈತಿಕತೆ, ತಾರತಮ್ಯ ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಸಮಾಜದಲ್ಲಿನ ಅತ್ಯಂತ ಕೆಟ್ಟ ನಡುವಳಿಕೆಗಳನ್ನು ಖಂಡಿಸಿದ್ದಾರೆ ಎನ್ನುವುದು ಅವರ ಪದ್ಯಗಳನ್ನು ನೋಡಿದಾಗ ತಿಳಿಯುತ್ತದೆ. ಸರ್ವ ಧರ್ಮವನ್ನು ಸಮಾನವಾಗಿ ಕಂಡು, ಸಮಾನವಾಗಿ ಪ್ರೀತಿಸಿದವರು ವೇಮನ. ಅವರು 17ನೇ ಶತಮಾನದಲ್ಲಿ ತೆಲುಗು ನಾಡಿನ ರಾಜ ಮನೆತನದಲ್ಲಿ ಜನಿಸಿದರೂ ಕೂಡ ಇವರನ್ನು ಕರ್ನಾಟಕ ಸ್ವೀಕರಿಸಿದೆ. ಇವರು ಆತ್ಮವಾದಿ ನೆಲೆಯಿಂದ ಮಾನವತಾವಾದಿ ನೆಲೆಗೆ ಪದ್ಯ ರಚಿಸುವ ಮೂಲಕ ಮಹಾಯೋಗಿ ಆಗಿದ್ದಾರೆ ಎಂದರು.

ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ, ವೇಮನರು ಸಂಸಾರದ ಬಂಧನಕ್ಕೊಳಗಾಗಿ ಕಷ್ಟ, ಸುಖ ಹಾಗೂ ದುಃಖಗಳನ್ನು ಅನುಭವಿಸಿ, ನಂತರ ಮಹಾನ್ ಯೋಗಿಗಳಾಗಿದ್ದಾರೆ.

ಅವರು ಅಸ್ಪೃಶ್ಯತೆಯ ವಿರುದ್ಧ ನೇರವಾಗಿ ಮಾತನಾಡುವ, ಖಂಡಿಸುವ ವ್ಯಕ್ತಿ ಆಗಿದ್ದರು. ಇವರ ಇತಿಹಾಸವನ್ನು ಯಾರು ಬರೆಯಲಿಲ್ಲ. ಆದರೆ, ವೇಮನರು ತಮ್ಮ ಪದ್ಯಗಳ ಮೂಲಕ ಪ್ರತಿಯೊಬ್ಬರ ಮನದಲ್ಲಿದ್ದಾರೆ. ಸರಳ ಭಾಷೆಯಲ್ಲಿ ಚತುಷ್ಪದಿ ರಚಿಸಿ, ಜನರಲ್ಲಿನ ಮೌಲ್ಯ ಜಾಗೃತಗೊಳಿಸಿದರು. ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ ಇವರ ಪದ್ಯಗಳಿಗೆ ವಿದೇಶಿಗರಿಂದಲೂ ಸಹ ಪ್ರಶಂಸೆ ವ್ಯಕ್ತವಾಗಿದೆ. 15ರಿಂದ 18ನೇ ಶತಮಾನ ವೇಮರ ಕಾಲಾವಧಿ ಎಂದು ಹೇಳಲಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ ಖಾದ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಬಿ.ನಾಗರಳ್ಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಸಹಾಯಕ ಆಯುಕ್ತ ರವಿ ತಿರ್ಲಾಪುರ, ತಹಶೀಲ್ದಾರ ಗುರುಬಸವರಾಜ, ನಗರಸಭೆ ಸದಸ್ಯ ಪ್ರಾಣೇಶ ಮಾದಿನೂರ, ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಗಣ್ಯರಾದ ಪ್ರಭಣ್ಣ ಹೆಬ್ಬಾಳ, ಸಿ.ವಿ.ಚಂದ್ರಶೇಖರ, ಸುರೇಶ ಭೂಮರಡ್ಡಿ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಯು.ನಾಗರಾಜ ಸ್ವಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT