ಪಟಾಕಿಯನ್ನೂ ಸುಡದ ದೆಹಲಿಯೇ ಇಲ್ನೋಡು; ಇದು ಅಣುಬಾಂಬ್‌ಗೆ ಎದ್ದ ಹೊಗೆಯಲ್ಲ, ಬೆಂಗಳೂರಿನಲ್ಲಿ ಕೆರೆಗಳಿಗೆ ಕೊಳ್ಳಿಯಿಟ್ಟಿದ್ದೇವೆ!: ನಾಗರಿಕರ ಆಕ್ರೋಶ

7

ಪಟಾಕಿಯನ್ನೂ ಸುಡದ ದೆಹಲಿಯೇ ಇಲ್ನೋಡು; ಇದು ಅಣುಬಾಂಬ್‌ಗೆ ಎದ್ದ ಹೊಗೆಯಲ್ಲ, ಬೆಂಗಳೂರಿನಲ್ಲಿ ಕೆರೆಗಳಿಗೆ ಕೊಳ್ಳಿಯಿಟ್ಟಿದ್ದೇವೆ!: ನಾಗರಿಕರ ಆಕ್ರೋಶ

Published:
Updated:
ಪಟಾಕಿಯನ್ನೂ ಸುಡದ ದೆಹಲಿಯೇ ಇಲ್ನೋಡು; ಇದು ಅಣುಬಾಂಬ್‌ಗೆ ಎದ್ದ ಹೊಗೆಯಲ್ಲ, ಬೆಂಗಳೂರಿನಲ್ಲಿ ಕೆರೆಗಳಿಗೆ ಕೊಳ್ಳಿಯಿಟ್ಟಿದ್ದೇವೆ!: ನಾಗರಿಕರ ಆಕ್ರೋಶ

ಬೆಂಗಳೂರು: ನಗರದ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಕೆರೆಯ ಸಂರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜನರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಆಕ್ರೋಶ, ವ್ಯಂಗ್ಯ ಮತ್ತು ಆತಂಕದ ಕೆಲವು ಟ್ವೀಟ್‌ಗಳು ಇಲ್ಲಿವೆ.

‘ನೋಡು ದೆಹಲಿಯೇ ನೀನು ಪಟಾಕಿಗಳನ್ನು ಸುಡುವಂತಿಲ್ಲ. ನೋಡಿಲ್ಲಿ, ಬೆಂಗಳೂರಿನಲ್ಲಿ ನಾವು ಕೆರೆಗಳನ್ನೇ ಸುಡುತ್ತಿದ್ದೇವೆ. ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ’ ಎಂದು ಹರ್ಷವರ್ಧನ್‌ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

‘ಕೆರೆಗಳಿಗೆ ಬೆಂಕಿ ಬೀಳುವ, ನದಿಗಳನ್ನು ಉಳಿಸಬೇಕೆಂಬ ಕೂಗೆದ್ದ ಮತ್ತು ಸಾಗರಗಳೇ ಮರುಭೂಮಿ ಆಗುತ್ತಿರುವ ಕಾಲಮಾನದಲ್ಲಿ ನಾವು ಬದುಕುತಿದ್ದೇವೆ. ನಮ್ಮ ಮಕ್ಕಳು ಇನ್ನೆಂತ ಕಾಲವನ್ನು ಕಾಣುವರೋ’ ಎಂದು ಪ್ರಿಯಾಂಕಾ ಸಚೆತಿ ಎಂಬುವರು ಪದ್ಯದ ಮೂಲದ ಆತಂಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry