ಚೌಕಾಬಾರ

7

ಚೌಕಾಬಾರ

Published:
Updated:
ಚೌಕಾಬಾರ

ಆಡೋಣು ಬಾರಾ

ಚೌಕಾಬಾರ

ಐದಿಂಟು ಐದು

ಚೌಕ ಬಿಡಿಸಿದ್ರೆ ಸಾಕು

ಸಿಗದಿದ್ರೆ ಕವಡೆ

ಹುಣಿಸೆಬೀಜ ಸವೆಯಲೇಬೇಕು

ಆಡಲು ಜನ

ಸಿಗದಿದ್ರೆ ನಾಲ್ಕು

ಇಬ್ರೇ ಸಾಕು!

ಎಲ್ಲರ ಬಳಿ

ನಾಲ್ಕು ಕಾಯಿ

ಎಲ್ಲ ಕಾಯಿ

ಮೊದಲು ಹಣ್ಣು ಮಾಡಿದವರೇ

ವಿಜಯಿ

ಕಾಯಂದ್ರೆ ಕಾಯಲ್ಲ!

ಹಣ್ಣಂದ್ರೆ ಹಣ್ಣಲ್ಲ!

ಮತ್ತೇನು ಗೊತ್ತಾ?

ಗೊತ್ತಾಗಬೇಕು ಅಂದ್ರೆ

ಆಡೋಣು ಬಾರಾ

ಚೌಕಾಬಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry