ಶುಕ್ರವಾರ, 29 ಮಾರ್ಚ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಫೈನಲ್‌ ಪಂದ್ಯದಲ್ಲಿ ಪಾಕ್‌ ಎದುರು ಜಯ: ಭಾರತ ಅಂಧರ ತಂಡಕ್ಕೆ ವಿಶ್ವಕಪ್‌
Last Updated 20 ಜನವರಿ 2018, 16:11 IST
ಅಕ್ಷರ ಗಾತ್ರ
ಶಾರ್ಜಾ: ಸುನಿಲ್ ರಮೇಶ್‌ (93) ಅವರ ಅಮೋಘ ಆಟದ ಬಲದಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಅಂಧರ ವಿಶ್ವಕಪ್‌ ಕ್ರಿಕೆಟ್ ಟ್ರೋಫಿಯನ್ನು ಉಳಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ 2014ರಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪಾಕ್ ವಿರುದ್ಧ ಜಯದಾಖಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2 ವಿಕೆಟ್‌ಗಳಿಂದ ಪಾಕಿಸ್ತಾನಕ್ಕೆ ಸೋಲುಣಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ 308ರನ್ ದಾಖಲಿಸಿತು. ಬಾಬರ್ ಮುನೀರ್ (57), ರಿಶತ್ ಖಾನ್‌ (48), ನಾಯಕ ನಾಸಿರ್ ಅಲಿ (47) ಉತ್ತಮ ಬ್ಯಾಟಿಂಗ್ ಮಾಡಿದರು.
ಸವಾಲಿನ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಸುನಿಲ್ ರಮೇಶ್ ನೆರವಾದರು. ಎಂಟು ಎಸೆತಗಳು ಬಾಕಿ ಇರುವಂತೆಯೇ ಭಾರತ ತಂಡ ಗುರಿ ತಲುಪಿತು.
ಜನವರಿ 13ರಂದು ನಡೆದ ಲೀಗ್ ಪಂದ್ಯದಲ್ಲಿಯೂ ಭಾರತ ತಂಡ ಪಾಕ್ ಎದುರು ಗೆದ್ದಿತ್ತು. ಆದರೆ ಫೈನಲ್ ಪಂದ್ಯದ ಅಂತಿಮ ಓವರ್‌ಗಳಲ್ಲಿ ಭಾರತ ರನ್ ದಾಖಲಿಸಲು ಪರದಾಡಿತು. ಸತತವಾಗಿ ಮೂರು ವಿಕೆಟ್ ಉರುಳಿದಾಗ ಒತ್ತಡಕ್ಕೆ ಒಳಗಾಯಿತು. ಆದರೆ ರಮೇಶ್‌ ಅವರ ಬೌಂಡರಿಗಳಿಂದ ತಂಡ ಚೇತರಿಸಿಕೊಂಡು ಗುರಿ ತಲುಪಿತು.
ಗಣ್ಯರಿಂದ ಶುಭಾಶಯ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡದ ಆಟಗಾರರಿಗೆ ಶುಭಾಶಯ ಕೋರಿದ್ದಾರೆ. ‘2018ರಲ್ಲಿ ವಿಶ್ವಕಪ್ ಗೆದ್ದ ಭಾರತ ಅಂಧರ ತಂಡಕ್ಕೆ ಅಭಿನಂದನೆಗಳು. ದೇಶಕ್ಕೆ ಹೆಮ್ಮ ತಂದುಕೊಟ್ಟ ಆಟಗಾರರು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಇವರು ನಿಜವಾದ ಚಾಂಪಿಯನ್‌ಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟಿಗ ಹರಭಜನ್ ಸಿಂಗ್ ಕೂಡ ಭಾರತದ ಆಟವನ್ನು ಹೊಗಳಿದ್ದಾರೆ. ‘ಅತ್ಯಂತ ಅಮೋಘ ಬ್ಯಾಟಿಂಗ್‌. ಅಂಧರ ತಂಡ ಅತ್ಯುತ್ತಮ ಸಾಧನೆ ಮಾಡಿದೆ. ಅಭಿನಂದನೆಗಳು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
What a win by, TeamIndia. Congratulations on winning, BlindCricketWorldCup
<script async="" src="https://platform.twitter.com/widgets.js" charset="utf-8"/>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT