4

ಮಹಿಳಾ ವಿ.ವಿ: ಇಬ್ಬರಿಗೆ ಗೌರವ ಡಾಕ್ಟರೇಟ್

Published:
Updated:
ಮಹಿಳಾ ವಿ.ವಿ: ಇಬ್ಬರಿಗೆ ಗೌರವ ಡಾಕ್ಟರೇಟ್

ವಿಜಯಪುರ: ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸೋಮವಾರ (ಜ 22) ನಡೆಯಲಿದೆ.

ಇಸ್ರೊ ವಿಜ್ಞಾನಿ ಟಿ.ಕೆ.ಅನುರಾಧಾ, ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ಡಾ.ಪಂಕಜ್‌ ಮಿತ್ತಲ್‌ ಅವರನ್ನು ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ಕುಲಪತಿ ಪ್ರೊ. ಸಬಿಹಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ರ‍್ಯಾಂಕ್‌ ಪಡೆದ 56 ವಿದ್ಯಾರ್ಥಿನಿಯರಿಗೆ 66 ಚಿನ್ನದ ಪದಕ, 21 ವಿದ್ಯಾರ್ಥಿನಿಯರಿಗೆ ಪಿಎಚ್‌.ಡಿ ಹಾಗೂ 11 ವಿದ್ಯಾರ್ಥಿನಿಯರಿಗೆ ಎಂ.ಫಿಎಲ್ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅಂಕಪಟ್ಟಿ ನಕಲು ತಡೆಗಟ್ಟಲು ವಿಶ್ವವಿದ್ಯಾಲಯ ಎಂಟು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಈ ಬಾರಿ ಅಂಕಪಟ್ಟಿ ಮೇಲೆ ವಿದ್ಯಾರ್ಥಿನಿಯ ಭಾವಚಿತ್ರವನ್ನು ಮುದ್ರಿಸಿದೆ ಎಂದು ಹೇಳಿದರು.

ನೇಮಕಾತಿ:

‘ಬೋಧಕ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ 47 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. 167 ಬೋಧಕೇತರ ಸಿಬ್ಬಂದಿ ಕಾಯಮಾತಿ ಪ್ರಕ್ರಿಯೆ ನಡೆದಿದೆ’ ಎಂದು ಕುಲಪತಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ಸ್ನಾತಕೋತ್ತರ ಪದವಿ ಕೇಂದ್ರದ ಅಭಿವೃದ್ಧಿಗೆ ₹ 20 ಕೋಟಿ ಅನುದಾನ ಮಂಜೂರಾಗಿದ್ದು, ಕಂಪ್ಯೂಟರ್‌ ಸೈನ್ಸ್‌, ಇಂಗ್ಲಿಷ್‌, ಗಣಿತ ಹಾಗೂ ವಾಣಿಜ್ಯ ವಿಭಾಗ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry