ಮತದಾರರ ಪಟ್ಟಿ ಆಕ್ಷೇಪಣೆ: ನಾಳೆ ಸಭೆ

7

ಮತದಾರರ ಪಟ್ಟಿ ಆಕ್ಷೇಪಣೆ: ನಾಳೆ ಸಭೆ

Published:
Updated:

ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವೀಕ್ಷಕರನ್ನಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ನೇಮಿಸಿದೆ. ಅವರು ಮಲ್ಲೇಶ್ವರದ 16ನೇ ಅಡ್ಡರಸ್ತೆಯ ಐ.ಪಿ.ಪಿ ಕೇಂದ್ರದಲ್ಲಿ ಇದೇ 22ರಂದು ಬೆಳಿಗ್ಗೆ 10ಕ್ಕೆ ಸಭೆ ನಡೆಸಲಿದ್ದಾರೆ.

2017ರ ನವೆಂಬರ್‌ 30ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿ ಹಾಗೂ ಇದೇ 12ರಿಂದ 22ರವರೆಗೆ ಚಾಲ್ತಿಯಲ್ಲಿರುವ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಬಿಬಿಎಂಪಿ ಸಹಾಯಕ ಆಯುಕ್ತರು (ಚುನಾವಣೆ) ಪ್ರಕಟಣೆಯಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry