ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.22 ರಿಂದ ವಿದೇಶಿ ಮರಳು ಮಾರುಕಟ್ಟೆಗೆ

Last Updated 20 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್‌) ವಿದೇಶದಿಂದ ಆಮದು ಮಾಡಿಕೊಂಡಿರುವ ಮರಳಿನ ಮಾರಾಟ ಸೋಮವಾರದಿಂದ (ಜ.22) ಆರಂಭವಾಗಲಿದೆ.

50 ಕೆ.ಜಿ. ಮರಳಿನ ಚೀಲಕ್ಕೆ ಬೆಂಗಳೂರಿನಲ್ಲಿ ₹ 200 ಬೆಲೆ ಇರಲಿದೆ. ಗಣಿ ಇಲಾಖೆಗೆ ಪಾವತಿಸುವ ಶುಲ್ಕ, ಜಿಎಸ್‍ಟಿ ಮತ್ತು ಆಮದು ಸುಂಕ ಸೇರಿ ಪ್ರತಿ ಟನ್‍ ಮರಳಿಗೆ ₹ 4,000 ಬೆಲೆ ನಿಗದಿಪಡಿಸಲಾಗಿದೆ.

‘ಸದ್ಯ ಬಿಡದಿಯ ಯಾರ್ಡ್‌ನಲ್ಲಿ ಮರಳು ದಾಸ್ತಾನು ಮಾಡಲಾಗಿದೆ. ಜನವರಿ ಕೊನೆಯ ವಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ನಂತರದ ದಿನಗಳಲ್ಲಿ ಕೆ.ಆರ್.ಪುರದ ಚನ್ನಸಂದ್ರದಲ್ಲಿ ಮರಳು ಮಾರಾಟ ಆರಂಭಿಸಲಾಗುವುದು’ ಎಂದು ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ. ಪ್ರಕಾಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಲೇಷಿಯಾದಿಂದ ಕೃಷ್ಣಪಟ್ಟಣಂಗೆ ಬರುವ ಒಂದು ಟನ್ ಮರಳಿಗೆ ₹ 2,300 ವೆಚ್ಚವಾಗುತ್ತದೆ. ಕೃಷ್ಣಪಟ್ಟಣಂನಲ್ಲೇ ಮರಳು ಚೀಲಕ್ಕೆ ಭರ್ತಿಯಾಗಲಿದೆ. ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸಲು ಪ್ರತಿ ಟನ್‍ಗೆ ₹ 1,100 ವೆಚ್ಚವಾಗಲಿದೆ. ಶೇ 5 ರಷ್ಟು ಜಿಎಸ್‍ಟಿ, ಜತೆಗೆ ಗಣಿ ಇಲಾಖೆಗೆ ಪ್ರತಿ ಟನ್‍ಗೆ ₹ 60 ಪಾವತಿಸಲಾಗುತ್ತದೆ. ಸಂಸ್ಥೆಗೆ ₹ 100 ರಿಂದ ₹ 150 ಲಾಭವಿಟ್ಟುಕೊಂಡು ₹ 4,000 ದರ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಎಂಎಸ್‌ಐಎಲ್ ವೆಬ್‌ಸೈಟ್‌ (www.msilonline.com) ಮೂಲಕವೂ ಮರಳು ಕಾದಿರಿಸಬಹುದು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮರಳು ಮಾರಾಟದ ವ್ಯವಸ್ಥೆ ಮಾಡಲಾಗುವುದು’ ಎಂದರು.

ಎಂಎಸ್‌ಐಎಲ್ ಯಾರ್ಡ್‌ ಸಂಪರ್ಕ ಸಂಖ್ಯೆ: 96069 30236 (ಬಿಡದಿ), 96069 30231 (ದೊಡ್ಡಬಳ್ಳಾಪುರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT