ಹಜ್ ಸಬ್ಸಿಡಿ ರದ್ದು: ಬಿಜೆಪಿ ಮನಸ್ಥಿತಿಗೆ ಸಾಕ್ಷಿ

7

ಹಜ್ ಸಬ್ಸಿಡಿ ರದ್ದು: ಬಿಜೆಪಿ ಮನಸ್ಥಿತಿಗೆ ಸಾಕ್ಷಿ

Published:
Updated:
ಹಜ್ ಸಬ್ಸಿಡಿ ರದ್ದು: ಬಿಜೆಪಿ ಮನಸ್ಥಿತಿಗೆ ಸಾಕ್ಷಿ

ಬೆಂಗಳೂರು: ‘ಹಜ್ ಯಾತ್ರಿಕರಿಗೆ ಕೊಡುತ್ತಿದ್ದ ಸಹಾಯಧನ (ಸಬ್ಸಿಡಿ) ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ  ಬಿಜೆಪಿ ಮನಸ್ಥಿತಿ ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಹಜ್ ಯಾತ್ರೆಗೆ ಯಾತ್ರಾರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಧರ್ಮದ ಹೆಸರಿನಲ್ಲಿ ಯಾರೂ ರಾಜಕಾರಣ ಮಾಡ

ಬಾರದು, ರಾಜಕಾರಣದಲ್ಲಿ ಧರ್ಮ ಇರಬೇಕು’ ಎಂದು ‍ಪ್ರತಿಪಾದಿಸಿದರು.

‘ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿಲ್ಲ ಎಂಬ ಕಾರಣಕ್ಕೆ ಹಜ್ ಯಾತ್ರಗೆ ಹೋಗುವುದನ್ನು ಯಾರೂ ನಿಲ್ಲಿಸುವುದಿಲ್ಲ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ಹೋದರೆ ಪುಣ್ಯ ಬರು

ತ್ತದೆ ಎಂಬುದು ಇಸ್ಲಾಂ ಧರ್ಮಿಯರ ನಂಬಿಕೆ. ಸ್ವಂತ ಹಣದಲ್ಲಾದರೂ ಯಾತ್ರೆ ಹೋಗಿಯೇ ತೀರುತ್ತಾರೆ’ ಎಂದರು.

ಹಜ್ ಸಚಿವ ರೋಷನ್ ಬೇಗ್ ಮಾತನಾಡಿ, ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರದ ಸಬ್ಸಿಡಿಯ ಅಗತ್ಯವಿಲ್ಲ, ಅದನ್ನು ವಾಪಸ್‌ ಪಡೆದಿರುವುದು ಸ್ವಾಗತಾರ್ಹ ಎಂದರು.

ಹಜ್ ಯಾತ್ರೆಗೆ ರಾಜ್ಯದಿಂದ 6,624 ಜನ ಆಯ್ಕೆಯಾಗಿದ್ದಾರೆ. ಯಾತ್ರೆಗೆ ಕಡಿಮೆ ಜನರಿಗೆ ಅವಕಾಶ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಜನರಿಗೆ ಅವಕಾಶ ನೀಡುವಂತೆ ಕೇಂದ್ರದ ಮೇಲೆ ಮುಖ್ಯಮಂತ್ರಿ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಮಾನವರಾಗಲು ನಾಲಾಯಕ್

ಕುವೆಂಪು ನಾಡಗೀತೆಯಲ್ಲಿ ‘ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟ’ ಎಂದು ಬಣ್ಣಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದವರು ಮಾನವರಾಗಲು ನಾಲಾಯಕ್ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

‘ದಯೆಯೇ ಧರ್ಮದ ಮೂಲ’ ಎಂಬುದನ್ನು ಬಸವಣ್ಣನವರೂ ಹೇಳಿದ್ದಾರೆ. ಆದರೆ, ಬಿಜೆಪಿಯವರು ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುತ್ತಿರುವುದು ವಿಪರ್ಯಾಸ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry