ಪೊಲೀಸ್ ಜೀಪಿನ ಗಾಜು ಒಡೆದರು

7

ಪೊಲೀಸ್ ಜೀಪಿನ ಗಾಜು ಒಡೆದರು

Published:
Updated:

ಬೆಂಗಳೂರು: ಕಿಡಿಗೇಡಿಗಳು ಶನಿವಾರ ಬೆಳಗಿನ ಜಾವ ಸಿದ್ದಾಪುರ ಠಾಣೆ ಇನ್‌ಸ್ಪೆಕ್ಟರ್‌ ಕೃಷ್ಣಮೂರ್ತಿ ಅವರ ಜೀಪಿನ ಗಾಜು ಒಡೆದಿದ್ದಾರೆ.

ಕೃಷ್ಣಮೂರ್ತಿ ಅವರ ಮನೆ ಆರ್‌.ಟಿ.ನಗರ ಪೊಲೀಸ್ ಠಾಣೆ ಸಮೀಪವೇ ಇದೆ. ಕರ್ತವ್ಯ ಮುಗಿಸಿ ಶುಕ್ರವಾರ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಬಂದ ಅವರು, ಎಂದಿನಂತೆ ಠಾಣೆ ಪಕ್ಕದಲ್ಲೇ ಜೀಪು ನಿಲ್ಲಿಸಿದ್ದರು.

2.45ಕ್ಕೆ ಬೈಕ್‌ನಲ್ಲಿ ಬಂದಿರುವ ಇಬ್ಬರು ಕಿಡಿಗೇಡಿಗಳು, ಜೀಪಿನ ಮುಂಭಾಗದ ಗಾಜಿನ ಮೇಲೆ ಕಲ್ಲು ಹಾಕಿ ಪರಾರಿಯಾಗಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಠಾಣೆ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ಪೊಲೀಸರು ಸುತ್ತಮುತ್ತಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry