ಪೊಲೀಸ್ ವಶದಲ್ಲಿ ಆರೋಪಿ ಸಾವು

7

ಪೊಲೀಸ್ ವಶದಲ್ಲಿ ಆರೋಪಿ ಸಾವು

Published:
Updated:

ಬೆಂಗಳೂರು: ಕಳ್ಳತನ ಪ್ರಕರಣದ ಆರೋಪಿ ಸಾದಿಕ್ ಪಾಷಾ (40) ತಿಲಕ್‌ನಗರ ಪೊಲೀಸರ ವಶದಲ್ಲೇ ಹೃದಯಾಘಾತದಿಂದ ಅಸುನೀಗಿದ್ದಾನೆ.

ಲಾರಿ ಚಾಲಕನಾದ ಸಾದಿಕ್, ಪತ್ನಿ–ಮಕ್ಕಳ ಜತೆ ಜೆ.ಪಿ.ನಗರ 8ನೇ ಹಂತದ ಅಂಜನಾಪುರದಲ್ಲಿ ನೆಲೆಸಿದ್ದ. ವಾಹನ ಕಳವು, ಮಾದಕ ವಸ್ತು ಮಾರಾಟ ಸೇರಿದಂತೆ ಆತನ ವಿರುದ್ಧ ತಿಲಕ್‌ನಗರ ಹಾಗೂ ತಲಘಟ್ಟಪುರ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

‘ಶುಕ್ರವಾರ ರಾತ್ರಿ 12.30ರ ಸುಮಾರಿಗೆ ಸಾದಿಕ್ ಹಾಗೂ ಆತನ ಸಂಬಂಧಿ ಅಮಿನ್‌ ಪಾಷಾನನ್ನು ವಶಕ್ಕೆ ಪಡೆದ ಸಿಬ್ಬಂದಿ, ಹೆಚ್ಚಿನ ವಿಚಾರಣೆಗಾಗಿ ಜೀಪಿನಲ್ಲಿ ಠಾಣೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಸಾದಿಕ್ ವಾಂತಿ ಮಾಡಿಕೊಂಡು ಅಸ್ವಸ್ಥನಾದ. ಕೂಡಲೇ ಆತನನ್ನು ತಿಲಕ್‌ನಗರದ ‘ಸಾಯಿ ಅಂಬಿಕಾ’ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು’ ಎಂದು ಆಗ್ನೇಯ ವಿಭಾಗದ ಡಿಸಿ‍ಪಿ ಬೋರಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry