ಬೋಧಗಯಾದಲ್ಲಿ ಸ್ಫೋಟ

7

ಬೋಧಗಯಾದಲ್ಲಿ ಸ್ಫೋಟ

Published:
Updated:
ಬೋಧಗಯಾದಲ್ಲಿ ಸ್ಫೋಟ

ಗಯಾ (ಬಿಹಾರ): ಇಲ್ಲಿನ ಮಹಾಬೋಧಿ ದೇವಾಲಯದ ಸಮೀಪ ಶನಿವಾರ ಎರಡು ಬಾಂಬ್‌ ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿತ್ತು.

ಪ್ರವಚನಕ್ಕಾಗಿ ಇಲ್ಲಿಗೆ ಬಂದಿರುವ ಟಿಬೆಟನ್ನರ ಧರ್ಮಗುರು ದಲೈಲಾಮಾ ವಾಸ್ತವ್ಯ ಮಾಡಿರುವ ಕಾರಣ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಲಾಚಿಂತನ ಮೈದಾನದಲ್ಲಿರುವ  ಅಡುಗೆ ಮನೆಯಲ್ಲಿ ಶುಕ್ರವಾರ ರಾತ್ರಿ ಸಣ್ಣ ಸ್ಫೋಟ ಸಂಭವಿಸಿತ್ತು. ಈ ಘಟನೆಯ ಬಳಿಕ ದಲೈಲಾಮಾ ಅವರ ಪ್ರವಚನ ಆಯೋಜನೆ ಮಾಡಿರುವ ಕಾಲಚಕ್ರ ಮೈದಾನದದಲ್ಲಿ ಪಟ್ನಾ  ಡಿಐಜಿ ವಿನಯ್‌ ಕುಮಾರ್‌ ನೇತೃತ್ವದ ತಂಡ ತೀವ್ರ ಕಾರ್ಯಾಚರಣೆ ಕೈಗೊಂಡ ವೇಳೆ ಬಾಂಬ್‌ಗಳು ಪತ್ತೆಯಾಗಿವೆ ಎಂದು ಐಜಿಪಿ ಎನ್‌.ಎಚ್‌ ಖಾನ್‌ ತಿಳಿಸಿದ್ದಾರೆ.

ದಲೈಲಾಮಾ ಅವರ ಪ್ರವಚನ ಮುಗಿದ ಕೆಲವೇ ಹೊತ್ತಿನಲ್ಲಿ ಈ ಸ್ಫೋಟ ಸಂಭವಿಸಿತ್ತು. ಇದು ಪ್ರವಚನ ಕೇಳಲು ಬಂದಿರುವ ಭಕ್ತರಲ್ಲಿ ಆತಂಕವನ್ನುಂಟು ಮಾಡಿತ್ತು’ ಎಂದು ಅವರು ಹೇಳಿದ್ದಾರೆ.

ದಲೈಲಾಮಾ ಅವರು ಇದೇ ಜನವರಿಗೆ 1ರಿಂದ ಇಲ್ಲಿ ಬಂದಿದ್ದು, ತಿಂಗಳ ಅಂತ್ಯದವರೆಗೆ ವಾಸ್ತವ್ಯ ಹೂಡಲಿದ್ದಾರೆ.

ಎನ್‌ಐಎ ತಂಡ: ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೊಂದು ದೆಹಲಿಯಿಂದ ಸ್ಥಳಕ್ಕೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry