ಎಚ್‌ಪಿಎಲ್‌: ಫೈನಲ್‌ಗೆ ನೈಟ್ಸ್‌, ಬ್ಯಾಷರ್ಸ್‌

7

ಎಚ್‌ಪಿಎಲ್‌: ಫೈನಲ್‌ಗೆ ನೈಟ್ಸ್‌, ಬ್ಯಾಷರ್ಸ್‌

Published:
Updated:

ಹುಬ್ಬಳ್ಳಿ: ಸ್ಕೈಟೌನ್‌ ಬ್ಯಾಷರ್ಸ್‌ ಮತ್ತು ಹುಬ್ಬಳ್ಳಿ ನೈಟ್ಸ್ ತಂಡಗಳು ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಮೂರನೇ ಆವೃತ್ತಿಯಲ್ಲಿ ಭಾನುವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ರಾಜನಗರದ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಎದುರು ಬ್ಯಾಷರ್ಸ್‌ 4 ವಿಕೆಟ್‌ಗಳ ಜಯ ಸಾಧಿಸಿತು. ಟೈಗರ್ಸ್‌ ನೀಡಿದ್ದ 172 ರನ್‌ ಗುರಿಯನ್ನು 19.1 ಓವರ್‌ಗಳಲ್ಲಿ ತಲುಪಿತು.

ಹೊನಲು ಬೆಳಕಿನಲ್ಲಿ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ನೈಟ್ಸ್ ತಂಡ 3 ವಿಕೆಟ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಮುಂಡಗೋಡ ಮಾನ್‌ಸ್ಟರ್ಸ್‌ 171 ರನ್‌ ಗುರಿ ನೀಡಿತ್ತು. ಇದನ್ನು ನೈಟ್ಸ್ ತಂಡ 19. 2 ಓವರ್‌ಗಳಲ್ಲಿ ಕಳೆದುಕೊಂಡು ತಲುಪಿತು. ಕೊನೆಯ ಓವರ್‌ನಲ್ಲಿ ಮಾನ್‌ಸ್ಟರ್ಸ್‌ ತಂಡದ ಫೀಲ್ಡರ್‌ ಒಂದು ಕ್ಯಾಚ್‌ ಕೈಚೆಲ್ಲಿದರು. ರನ್‌ ಔಟ್‌ ಅವಕಾಶವನ್ನೂ ಹಾಳುಮಾಡಿಕೊಂಡರು. ಇದರಿಂದ ಓವರ್‌ನ ಕೊನೆಯವರೆಗೂ ಕಠಿಣ ಹೋರಾಟ ಮಾಡಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry