ಮ್ಯೂಚುವಲ್‌ ಫಂಡ್ಸ್‌ ₹ 6,200 ಕೋಟಿ ಬಂಡವಾಳ ಸಂಗ್ರಹ

7

ಮ್ಯೂಚುವಲ್‌ ಫಂಡ್ಸ್‌ ₹ 6,200 ಕೋಟಿ ಬಂಡವಾಳ ಸಂಗ್ರಹ

Published:
Updated:

ನವದೆಹಲಿ : ಚಿಲ್ಲರೆ ಹೂಡಿಕೆದಾರರು ಮ್ಯೂಚುವಲ್ ಫಂಡ್ಸ್‌ನಲ್ಲಿ ಬಂಡವಾಳ ತೊಡಗಿಸಲು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು (ಸಿಪ್‌) ಆಯ್ಕೆ ಮಾಡುತ್ತಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಮ್ಯೂಚುವಲ್ ಫಂಡ್‌ ಉದ್ಯಮವು ಸಿಪ್‌ ಮೂಲಕ ₹ 6,200 ಕೋಟಿ ಸಂಗ್ರಹಿಸಿವೆ. 2016ರ ಡಿಸೆಂಬರ್‌ನಲ್ಲಿ ಸಂಗ್ರಹಿಸಿದ್ದ ₹ 3,973 ಕೋಟಿಗೆ  ಹೋಲಿಸಿದರೆ ಶೇ 56 ರಷ್ಟು ಹೆಚ್ಚಾಗಿದೆ.

2017ರಲ್ಲಿ ‌ಸಿಪ್‌ ಮೂಲಕ ಒಟ್ಟಾರೆ ₹ 59,000 ಕೋಟಿಗೂ ಹೆಚ್ಚಿ ಬಂಡವಾಳ ಸಂಗ್ರಹಿಸಿವೆ ಎಂದು ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ. ‘ಷೇರುಗಳಿಗೆ ಸಂಪರ್ಕ ಹೊಂದಿರುವ ಯೋಜನೆಗಳ ಉತ್ತಮ ಸಾಧನೆ ಮತ್ತು ಉದ್ಯಮವು ನೀಡುತ್ತಿರುವ ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳಿಂದಾಗಿ  ಹೂಡಿಕೆ ಹೆಚ್ಚಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry