ಮೈಸೂರು ವಿ.ವಿ ಚಾಂಪಿಯನ್

7

ಮೈಸೂರು ವಿ.ವಿ ಚಾಂಪಿಯನ್

Published:
Updated:
ಮೈಸೂರು ವಿ.ವಿ ಚಾಂಪಿಯನ್

ಮೈಸೂರು: ಸೆಮಿಫೈನಲ್ ಲೀಗ್‌ನಲ್ಲಿ ಆಡಿದ ಎಲ್ಲ ಮೂರೂ ಪಂದ್ಯಗಳಲ್ಲೂ ಗೆಲುವು ಪಡೆದ ಆತಿಥೇಯ ಮೈಸೂರು ವಿಶ್ವವಿದ್ಯಾನಿಲಯ ತಂಡದವರು ಇಲ್ಲಿ ನಡೆದ ದಕ್ಷಿಣ ವಲಯ ಅಂತರ ವಿ.ವಿ. ಪುರುಷರ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದರು.

ವಿ.ವಿ. ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಶನಿವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ತಂಡದವರು 19–13 ರಲ್ಲಿ ದಾವಣಗೆರೆ ವಿ.ವಿ ತಂಡವನ್ನು ಮಣಿಸಿದರು. ನಾಲ್ಕು ನಿಮಿಷ 10 ಸೆಕೆಂಡ್‌ ಆಡಿದ್ದಲ್ಲದೆ, ಎಂಟು ಪಾಯಿಂಟ್ ಕಲೆಹಾಕಿದ ನಾಯಕ ಸುದರ್ಶನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಬೆಳಿಗ್ಗೆ ನಡೆದ ತನ್ನ ಎರಡನೇ ಲೀಗ್‌ ಪಂದ್ಯದಲ್ಲಿ ಮೈಸೂರು ವಿ.ವಿ ತಂಡ 11–10 ರಲ್ಲಿ ಕೇರಳದ ಕಲ್ಲಿಕೋಟೆ ವಿ.ವಿ ವಿರುದ್ಧ ರೋಚಕ ಗೆಲುವು ಪಡೆದಿತ್ತು. ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್‌ ಮಂಗಳೂರು ವಿ.ವಿ ತಂಡವನ್ನು ಮಣಿಸಿತ್ತು. ಈ ಮೂಲಕ ಒಟ್ಟು ಆರು ಪಾಯಿಂಟ್‌ ಕಲೆಹಾಕಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಶನಿವಾರ ಆಡಿದ ಎರಡು ಪಂದ್ಯಗಳನ್ನು ಗೆದ್ದುಕೊಂಡ ಮಂಗಳೂರು ವಿ.ವಿ. ‘ರನ್ನರ್‌ ಅಪ್’ ಸ್ಥಾನ ಪಡೆದುಕೊಂಡಿತು. ಈ ತಂಡ ಬೆಳಿಗ್ಗೆ ನಡೆದ ಪಂದ್ಯದಲ್ಲಿ

11–10 ರಲ್ಲಿ ದಾವಣಗೆರೆ ವಿ.ವಿ ವಿರುದ್ಧ ಜಯ ಪಡೆದರೆ, ದಿನದ ಎರಡನೇ ಪಂದ್ಯದಲ್ಲಿ 16–10 ರಲ್ಲಿ ಕೇರಳದ ಕಲ್ಲಿಕೋಟೆ ವಿ.ವಿ ತಂಡವನ್ನು ಸೋಲಿಸಿತು.

ಕಲ್ಲಿಕೋಟೆ ಮತ್ತು ದಾವಣಗೆರೆ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡವು. ಈ ನಾಲ್ಕೂ ತಂಡಗಳು ಅಖಿಲ ಭಾರತ ಅಂತರ ವಿ.ವಿ ಟೂರ್ನಿಗೆ ಅರ್ಹತೆ ಪಡೆದುಕೊಂಡರು.

ಅಖಿಲ ಭಾರತ ಟೂರ್ನಿ ಇದೇ ತಾಣದಲ್ಲಿ ಜ.22 ರಿಂದ 24ರವರೆಗೆ ನಡೆಯಲಿದೆ.

ಅಂತಿಮ ಸ್ಥಾನ: 1.ಮೈಸೂರು ವಿ.ವಿ (6 ಪಾಯಿಂಟ್), 2.ಮಂಗಳೂರು ವಿ.ವಿ (4 ಪಾಯಿಂಟ್), 3.ಕಲ್ಲಿಕೋಟೆ ವಿ.ವಿ (2 ಪಾಯಿಂಟ್), 4.ದಾವಣಗೆರೆ ವಿ.ವಿ (ಶೂನ್ಯ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry