ನೇಥನ್ ಲಿಯೊನ್‌ ನಾಯಕ

7

ನೇಥನ್ ಲಿಯೊನ್‌ ನಾಯಕ

Published:
Updated:

ಸಿಡ್ನಿ (ಎಎಫ್‌ಪಿ): ಆಫ್‌ ಸ್ಪಿನ್ನರ್‌ ನೇಥನ್‌ ಲಿಯೊನ್, ಮುಂದಿನ ತಿಂಗಳು ನಡೆಯುವ ಇಂಗ್ಲೆಂಡ್‌ ವಿರುದ್ಧದ ಟ್ವೆಂಟಿ–20 ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಇಲೆವನ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಶನಿವಾರ ಈ ವಿಷಯವನ್ನು ತಿಳಿಸಿದೆ.

ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಲಿಯೊನ್‌ ಮಿಂಚಿದ್ದರು. ಐದು ಪಂದ್ಯಗಳನ್ನು ಆಡಿದ್ದ ಅವರು 29.23ರ ಸರಾಸರಿಯಲ್ಲಿ 21 ವಿಕೆಟ್‌ ಉರುಳಿಸಿದ್ದರು. ಟೆಸ್ಟ್‌ ಮಾದರಿಯಲ್ಲಿ 290 ವಿಕೆಟ್‌ ಗಳಿಸಿರುವ ನೇಥನ್‌, ಆಸ್ಟ್ರೇಲಿಯಾದ ಯಶಸ್ವಿ ಆಫ್‌ ಸ್ಪಿನ್ನರ್‌ ಎನಿಸಿದ್ದಾರೆ.

‘ಪ್ರಧಾನ ಮಂತ್ರಿ ಇಲೆವನ್‌ ತಂಡವನ್ನು ಮುನ್ನಡೆಸುವುದು ಬಹುದೊಡ್ಡ ಗೌರವ. ರಿಕಿಪಾಂಟಿಂಗ್‌, ಮೈಕಲ್‌ ಹಸ್ಸಿ ಮತ್ತು ಬ್ರೆಟ್‌ ಲೀ ಅವರೊಂದಿಗೆ ಆಡುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಲಿಯೊನ್‌ ಹೇಳಿದ್ದಾರೆ.

ಅಭ್ಯಾಸ ಪಂದ್ಯ ಫೆಬ್ರುವರಿ 2 ರಂದು ಮನುಕಾ ಓವಲ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry