ಇಂದು ಗೋವಾ–ಕೇರಳ ಪೈಪೋಟಿ

7

ಇಂದು ಗೋವಾ–ಕೇರಳ ಪೈಪೋಟಿ

Published:
Updated:
ಇಂದು ಗೋವಾ–ಕೇರಳ ಪೈಪೋಟಿ

ಕೊಚ್ಚಿ : ಕೇರಳ ಬ್ಲಾಸ್ಟರ್ಸ್ ತಂಡ ತವರಿನಲ್ಲಿ ಆಡುವ ಪಂದ್ಯದಲ್ಲಿ ಭಾನುವಾರ ಎಫ್‌ಸಿ ಗೋವಾ ತಂಡದ ಸವಾಲು ಎದುರಿಸಲಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಪಂದ್ಯದಲ್ಲಿ ಕೇರಳ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಈ ಮೊದಲು ಡಿಸೆಂಬರ್‌ನಲ್ಲಿ ನಡೆದ ಪಂದ್ಯದಲ್ಲಿ ಈ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಆಗ ಎಫ್‌ಸಿ ಗೋವಾ 5–2 ಗೋಲುಗಳಲ್ಲಿ ಬ್ಲಾಸ್ಟರ್ಸ್‌ಗೆ ಸೋಲುಣಿಸಿತ್ತು.

ಇಂಗ್ಲೆಂಡ್ ತಂಡದ ಹಿರಿಯ ಆಟಗಾರ ಡೇವಿಡ್ ಜೇಮ್ಸ್‌ ಕೇರಳ ತಂಡದ ಕೋಚ್ ಆಗಿದ್ದಾರೆ. ಈ ತಂಡ 14 ಪಾಯಿಂಟ್ಸ್‌ಗಳೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆದ್ದಿದೆ. ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಎಫ್‌ಸಿ ಗೋವಾ ಆಡಿದ್ದು ಒಂಬತ್ತು ಪಂದ್ಯವಾದರೂ, ಐದರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಒಂದು ಪಂದ್ಯವನ್ನು ಮಾತ್ರ ಡ್ರಾ ಮಾಡಿಕೊಂಡಿದೆ. ಈ ತಂಡದ ಬಳಿ 16 ಪಾಯಿಂಟ್ಸ್‌ಗಳು ಇವೆ.

ಕೇರಳ ತಂಡ ಪ್ರಬಲ ರಕ್ಷಣಾಪಡೆಯನ್ನು ಹೊಂದಿದೆ. ಆದ್ದರಿಂದ ಹೆಚ್ಚಿನ ಪಂದ್ಯಗಳಲ್ಲಿ ಈ ತಂಡಡ್ರಾ ಸಾಧಿಸಿದೆ. ಗೋವಾ

ತಂಡದ ಫಾವರ್ಡ್ ಆಟಗಾರರು ಎದುರಾಳಿಯ ರಕ್ಷಣಾಗೋಡೆಯನ್ನು ದಾಟಲು ಚುರುಕಿನ ಆಟದ ಮೊರೆಹೋಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry