ಬಂದಿದೆ ಬರೀ ₹ 6ರ ಸೇನಾ ಜಲ್‌ ಎಂಬ ಹೊಸ ನೀರಿನ ಬ್ರಾಂಡ್‌

7

ಬಂದಿದೆ ಬರೀ ₹ 6ರ ಸೇನಾ ಜಲ್‌ ಎಂಬ ಹೊಸ ನೀರಿನ ಬ್ರಾಂಡ್‌

Published:
Updated:
ಬಂದಿದೆ ಬರೀ ₹ 6ರ ಸೇನಾ ಜಲ್‌ ಎಂಬ ಹೊಸ ನೀರಿನ ಬ್ರಾಂಡ್‌

ನವದೆಹಲಿ: ನಿಮಗೆ ನೀರಡಿಕೆಯಾಗಿ ಬಾಟಲಿ ನೀರು ಕುಡಿಯಬೇಕು ಎಂದೆನಿಸಿದಾಗ ನೀರನ್ನು ಮಾರುವ ಜನಪ್ರಿಯ ಬ್ರಾಂಡ್‌ಗಳು ನೆನಪಾಗಬಹುದು. ಆ ಬ್ರಾಂಡ್‌ಗಳ ಸಾಲಿಗೆ ಹೊಸದೊಂದು ಸೇರಿಕೊಂಡಿದೆ. ಇದುವೆ ‘ಸೇನಾ ಜಲ್‌’ ಬ್ರಾಂಡ್‌. ಇದನ್ನು ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘವು(ಎಡಬ್ಲ್ಯೂಡಬ್ಲ್ಯೂಎ) ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ ಕೇವಲ ₹ 6. ₹ 10ರ ಬಾಟಲಿಗಳು ಸಹ ಲಭ್ಯವಿವೆ.

ಸಂಘವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಪರಿಚಯಿಸಿದ್ದರೂ ಹೆಚ್ಚು ಜನರಿಗೆ ತಲುಪಲು ಆಗಿರಲಿಲ್ಲ. ತನ್ನ ಸೇವೆಯಲ್ಲಿ ಈಗ ಹಲವಾರು ಮಾರ್ಪಾಡುಗಳನ್ನು ಮಾಡಿಕೊಂಡು ಮತ್ತೊಮ್ಮೆ ಮಾರುಕಟ್ಟೆಗೆ ಬಂದಿದೆ. ಭಾರತೀಯ ಸೇನೆಯಲ್ಲಿ ಇರುವವರ ಕುಟುಂಬದ ಸದಸ್ಯರೇ ಈ ಸೇನಾ ಜಲ್‌ ಸಂಸ್ಕರಿಸಿ, ಬಾಟಲಿಗಳಲ್ಲಿ ತುಂಬುತ್ತಾರೆ.

ಈ ನೀರಿನ ಬಾಟಲಿಗಳ ಮಾರಾಟದಿಂದ ಬರುವ ಲಾಭಾಂಶವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ನಿಮಗೆ ಕಾಡಬಹುದು. ಅದನ್ನು ಸೇವೆಯಲ್ಲಿರುವಾಗ ಮಡಿದ ಸೈನಿಕರ ಪತ್ನಿಯರು ಮತ್ತು ಸೇವಾನಿರತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಳಸುವುದಾಗಿ ಸಂಘ ಹೇಳಿಕೊಂಡಿದೆ.

ಈ ಸಂಘವು ಭಾರತೀಯ ಸೇನೆಯ ಅಂಗಸಂಸ್ಥೆಯಾಗಿದೆ. ಇದನ್ನು ಭೂಸೇನೆಯ ಮುಖ್ಯಸ್ಥರಾಗಿರುವ ಜನರಲ್‌ ಬಿಪಿನ್‌ ರಾವತ್‌ ಅವರ ಪತ್ನಿ ಮಧುಲಿಕಾ ರಾವತ್‌ ಮುನ್ನಡೆಸುತ್ತಿದ್ದಾರೆ. ಈ ಸಂಘವು ಸೈನಿಕರನ್ನು ಅವಲಂಬಿಸಿರುವ ಕುಟುಂಬ ಸದಸ್ಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry