ಇವರು ನಮ್ಮವರು!

7

ಇವರು ನಮ್ಮವರು!

Published:
Updated:
ಇವರು ನಮ್ಮವರು!

ಈಚೆಗೆ ಆಂಧ್ರದ ವಿಶಾಖಪಟ್ಟಣಂ ಮೂಲದವ ಎಂದು ಹೇಳಿಕೊಂಡಿರುವ 29 ವರ್ಷದ ಸಂಗೀತ್ ಕುಮಾರ್ ಎಂಬ ಯುವಕ, ತಾನು ವಿಶ್ವಸುಂದರಿ ಐಶ್ವರ್ಯಾ ರೈ ಮಗ ಎಂದು ಹೇಳಿಕೊಂಡಿರುವ ಸಂಗತಿ ವೈರಲ್‌ ಆಗಿತ್ತು. 1988ರಲ್ಲಿ ಐಶ್ವರ್ಯಾ ಐವಿಎಫ್‌ ವಿಧಾನದ ಮೂಲಕ ನನಗೆ ಜನ್ಮ ನೀಡಿದ್ದಾಳೆ ಎಂದು ಆತ ಮಾಧ್ಯಮಗಳೆದುರೂ ಹೇಳಿಕೊಂಡಿದ್ದನು. ಆಶ್ಚರ್ಯವೆಂದರೆ 1988ರಲ್ಲಿ ಐಶ್ವರ್ಯಾ ವಯಸ್ಸು 14! ಇಂಥ ಘಟನೆ ನಡೆದಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಖ್ಯಾತ ನಟರನ್ನು ತಮ್ಮವರು ಎಂದು ಹೇಳಿಕೊಂಡಿರುವ ಅನೇಕ ತಮಾಷೆ ಎನಿಸುವ ಸಂಗತಿಗಳು ನಡೆದಿವೆ.

ಶಾಹಿದ್‌ನ ಮೊದಲ ಪತ್ನಿ ಯಾರು?

2012ರಲ್ಲಿ ನಟ ರಾಜ್‌ಕುಮಾರ್‌ ಅವರ ಪುತ್ರಿ ವಸ್ತವಿಕ್ತ ಎಂಬವರು,  ‘ನಾನು ಶಾಹಿದ್‌ ಪತ್ನಿ, ನಾವಿಬ್ಬರೂ ಮದುವೆಯಾಗಿದ್ದೇವೆ’ ಎಂದು ಹೇಳಿಕೊಂಡಿದ್ದರು. ಇಷ್ಟೇ ಅಲ್ಲ ಶಾಹಿದ್‌ ಹೋದ ಕಡೆಯಲ್ಲೆಲ್ಲಾ ಆತನನ್ನು ಹಿಂಬಾಲಿಸುತ್ತಿದ್ದ ವಸ್ತವಿಕ್ತ, ಶಾಹಿದ್‌ ಮನೆ ಮುಂದೆಯೇ ಕಾಯುತ್ತಾ ಕೂತಿರುತ್ತಿದ್ದರು. ಬಳಿಕ ಕಾಟ ತಡೆಯಲಾಗದೇ ಶಾಹಿದ್‌ ಆಕೆಯ ವಿರುದ್ಧ ದೂರು ಸಲ್ಲಿಸಿದ್ದರು.

ಶಾರುಖ್‌ ನನ್ನ ಮಗ

1996ರಲ್ಲಿ ಮಹಾರಾಷ್ಟ್ರದ ಲಾತೂರ್‌ನ ಮಹಿಳೆಯೊಬ್ಬರು ‘ಶಾರುಖ್‌ ನನ್ನ ಮಗ’ ಎಂದು ಹೇಳಿಕೊಂಡು ಕೋರ್ಟ್‌ ಮೆಟ್ಟಿಲೇಏರಿದ್ದರು. ‘1960ರಲ್ಲಿ ನಾನು ನನ್ನ ಮಗನನ್ನು ಕಳೆದುಕೊಂಡೆ. ಶಾರುಖ್‌ನೇ ನನ್ನ ಮಗ. ಪೋಸ್ಟರ್‌ನಲ್ಲಿ ಚಿತ್ರ ನೋಡಿ ಆತನನ್ನು ಪತ್ತೆ ಹಚ್ಚಿದೆ’ ಎಂದು ಆ ಮಹಿಳೆ ಹೇಳಿಕೊಂಡಿದ್ದರು.

ಅಭಿಷೇಕ್‌ಗೂ ‘ಪತ್ನಿ’ಯರ ಕಾಟ

ಬಾಲಿವುಡ್‌ನಲ್ಲಿ ಬಚ್ಚನ್‌ ಕುಟುಂಬ ಗೌರವಯುತ ಕುಟುಂಬ. 2007ರಲ್ಲಿ ರೂಪದರ್ಶಿ ಜಾನ್ವಿ ಕಪೂರ್‌ ಎಂಬವವರು ಬಚ್ಚನ್‌ ಮನೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಪರ್ಯಾಸವೆಂದರೆ ಅದೇ ದಿನ ಅಭಿಷೇಕ್‌ ಮದುವೆ. ಕೈ ಮಣಿಕಟ್ಟನ್ನು ಚಾಕುವಿನಿಂದ ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅವರು ‘ಐಶ್ವರ್ಯಾ ಜೊತೆ ಅಭಿಷೇಕ್‌ ಮದುವೆ ಆಗುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಹೇಳಿಕೊಂಡು ಸುದ್ದಿಯಾಗಿದ್ದರು.ಧನುಷ್‌

ಧನುಷ್‌ ನಮ್ಮ ಮಗ!

2017ರಲ್ಲಿ ತಮಿಳುನಾಡಿನ ಮೇಲೂರು ಎಂಬಲ್ಲಿನ ಆರ್‌. ಕಾರ್ತಿರೇಷನ್‌ ಹಾಗೂ ಅವರ ಪತ್ನಿ ಕೆ. ಮೀನಾಕ್ಷಿ ದಕ್ಷಿಣ ಭಾರತದ ಸಿನಿಮಾ ನಟ ಧನುಷ್‌ ನಮ್ಮ ಮಗ ಎಂದು ಹೇಳಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು. ಧನುಷ್‌, 16 ವರ್ಷದವನಿದ್ದಾಗ ಪರಾರಿಯಾಗಿದ್ದಾನೆ ಎಂದು ದೂರಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಧನುಷ್‌ ಅಲ್ಲಗೆಳೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry