ಪಾರ್ಟಿ ಹುಡುಗಿಯ ತೆಲುಗು ‘ಚಲೋ’

7

ಪಾರ್ಟಿ ಹುಡುಗಿಯ ತೆಲುಗು ‘ಚಲೋ’

Published:
Updated:
ಪಾರ್ಟಿ ಹುಡುಗಿಯ ತೆಲುಗು ‘ಚಲೋ’

ತಿರುಪ್ಪುರಂ ಎಂಬುದೊಂದು ಊರು. ತಮಿಳು– ತೆಲುಗು ಭಾಷಿಕರ ನಡುವೆ ತಂತಿಬೇಲಿ. ಗಡಿದಾಟುವ ಹುಡುಗನಿಗೆ (ನಾಗಶೌರ್ಯ) ತಮಿಳು ಹುಡುಗಿಯ (ರಶ್ಮಿಕಾ ಮಂದಣ್ಣ) ಮೇಲೆ ಮನಸು. ಒಂದಿಷ್ಟು ರೊಮಾನ್ಸು, ಡಾನ್ಸು, ಫೈಟು, ಕಾಮಿಡಿ.

ಯುಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ‘ಚಲೋ’ ಚಿತ್ರದ ಟ್ರೇಲರ್ ನೋಡಿದಾಗ ಅರ್ಥವಾಗಿದ್ದು ಇಷ್ಟೇ. ಕನ್ನಡತಿ ರಶ್ಮಿಕಾ ಮಂದಣ್ಣ ಎಂದಿನಂತೆ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜಲಪಾತದ ದೃಶ್ಯ ಅವರ ಸೌಂದರ್ಯವನ್ನು ಬಿಂಬಿಸಿದೆ. ಫೈಟಿಂಗ್ ದೃಶ್ಯಗಳನ್ನೂ ಕಾಮಿಡಿ ಎಂಬಂತೆಯೇ ನಾಗ ಶೌರ್ಯ ನಿಭಾಯಿಸಿದ್ದಾರೆ. ಮೊದಲ ನೋಟಕ್ಕೆ ಚಾಕೊಲೇಟ್‌ ಹೀರೊ ಎನಿಸಿಬಿಡುತ್ತಾರೆ.

ಇಷ್ಟಪಟ್ಟವರ ಪ್ರೇಮದ ಸನ್ನಿವೇಶಗಳಂತೆ ಸಿಟ್ಟು– ಜಗಳಗಳೂ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎನ್ನುವುದು ನಿರ್ದೇಶಕ ವೆಂಕಿ ಕುಡುಮುಲ ಅವರಿಗೆ ಅರ್ಥವಾಗಿದೆ. ಕನ್ನಡಿಗೆ ಅಚ್ಯುತ್ ಕುಮಾರ್‌ ಟ್ರೇಲರ್‌ನಲ್ಲಿ ಖಡಕ್ ಲುಕ್‌ನೊಂದಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಪಾತ್ರವೇನೆಂಬುದು ಅರ್ಥವಾಗುವುದಿಲ್ಲ.

ಹಿನ್ನೆಲೆ ಸಂಗೀತ ಮಧುರವಾಗಿದೆ, ಕೃತಕ ಬೆಳಕಿಗೆ ಮಣೆಹಾಕದ ಛಾಯಾಗ್ರಾಹಣದಲ್ಲಿ ಎಲ್ಲವೂ ಸುಂದರ, ಎಲ್ಲರೂ ಚಂದ. ಚಿತ್ರ ಫೆ.2ಕ್ಕೆ ತೆರೆ ಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry