ಅಫ್ಗಾನಿಸ್ತಾನ: ಗಣಿ ಪಕ್ಕದ ರಸ್ತೆಯಲ್ಲಿ ಸ್ಫೋಟ, 12 ನಾಗರಿಕರ ಸಾವು

7

ಅಫ್ಗಾನಿಸ್ತಾನ: ಗಣಿ ಪಕ್ಕದ ರಸ್ತೆಯಲ್ಲಿ ಸ್ಫೋಟ, 12 ನಾಗರಿಕರ ಸಾವು

Published:
Updated:
ಅಫ್ಗಾನಿಸ್ತಾನ: ಗಣಿ ಪಕ್ಕದ ರಸ್ತೆಯಲ್ಲಿ ಸ್ಫೋಟ, 12 ನಾಗರಿಕರ ಸಾವು

ಹೆರಾತ್: ಅಫ್ಗಾನಿಸ್ತಾನದ ಗುಲ್ರಾನ್ ಜಿಲ್ಲೆಯಲ್ಲಿರುವ ಇಲ್ಲಿನ ಗಣಿ ಪಕ್ಕದ ರಸ್ತೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಿಂದಾಗಿ 12 ನಾಗರಿಕರು ಮೃತಪಟ್ಟಿದ್ದಾರೆ. ಒಬ್ಬರಿಗೆ ಗಾಯವಾಗಿದೆ.

ಇದುವರೆಗೆ ಯಾವ ಸಂಘಟನೆಯೂ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಆದರೆ ತಾಲಿಬಾನ್ ಸಂಘಟನೆ ಅಫ್ಗಾನಿಸ್ತಾನದ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಹೆರಾತ್ ವಲಯದ ಪೊಲೀಸ್ ವಕ್ತಾರ ಅಬ್ದುಲ್ ಅಹಾದ್ ವಾಲಿಜಾಡಾ ಹೇಳಿದ್ದಾರೆ. 

ಈ ಅನಾಹುತ ರಾತ್ರಿ 10 ಗಂಟೆ ಸುಮಾರಿನಲ್ಲಿ ನಡೆದಿದೆ.

ಈ ಘಟನೆ ನಡೆದು ಒಂದು ಗಂಟೆಯ ತರುವಾಯ ಕಾಬೂಲ್‌ನ ಐಷಾರಾಮಿ ಹೋಟೆಲ್ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಾಲ್ವರು ಭಯೋತ್ಪಾದಕರು ಸೇರಿದಂತೆ 18 ಮಂದಿ ಹತ್ಯೆಗೀಡಾಗಿದ್ದಾರೆ. ತಾಲಿಬಾನ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಇದನ್ನೂ ಓದಿ...

ಕಾಬೂಲ್‌ ಹೋಟೆಲ್ ದಾಳಿ: ನಾಲ್ವರು ಬಂದೂಕುದಾರಿಗಳ ಹತ್ಯೆ, 153 ಒತ್ತೆಯಾಳುಗಳ ಬಿಡುಗಡೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry