‘ಸಾಹೊ’ದಲ್ಲಿ ಶ್ರದ್ಧಾ ಹವಾ

7

‘ಸಾಹೊ’ದಲ್ಲಿ ಶ್ರದ್ಧಾ ಹವಾ

Published:
Updated:
‘ಸಾಹೊ’ದಲ್ಲಿ ಶ್ರದ್ಧಾ ಹವಾ

ಪ್ರಭಾಸ್‌ ಮತ್ತು ಶ್ರದ್ಧಾ ಕಪೂರ್‌ ನಟನೆಯ ‘ಸಾಹೊ’ ಚಿತ್ರ ಸದಾ ಸುದ್ದಿ ಮಾಡುತ್ತಲೇ ಇದೆ. ಅಬ್ಬರದ ನಟನೆಗಾಗಿ ‘ಬಾಹುಬಲಿ’ ಎಂದೇ ಗುರುತಿಸಿಕೊಳ್ಳುತ್ತಿರುವ ಪ್ರಭಾಸ್‌ಗೆ, ‘ಸ್ತ್ರೀ’ಯ ನಟಿ ಶ್ರದ್ಧಾ ಕಪೂರ್‌ ಜೋಡಿಯಾಗಿರುವುದು ಗೊತ್ತೇ ಇದೆ. ಪ್ರಭಾಸ್‌ಗೆ ಹಿಂದಿ ಕಲಿಸುತ್ತಲೇ ಇಡೀ ಚಿತ್ರ ತಂಡವನ್ನೇ ಆವರಿಸಿಕೊಳ್ಳುತ್ತಿರುವ ಶ್ರದ್ಧಾ ಕಪೂರ್‌, ಸೆಟ್‌ನಲ್ಲೆಲ್ಲಾ ಚಿನಕುರುಳಿಯಂತೆ ಓಡಾಡುತ್ತಿದ್ದಾರಂತೆ.

‘ಸ್ತ್ರೀ’ಯಲ್ಲಿ ರಾಜ್‌ಕುಮಾರ್ ರಾವ್‌ ಜತೆ ನಟಿಸುತ್ತಿರುವುದು ಖುಷಿಯನ್ನು ಹೆಚ್ಚಿಸಿದೆ. ಆದರೆ ‘ಸಾಹೊ’ದಲ್ಲಿ ಪ್ರಭಾಸ್‌ ಜತೆ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಅದೃಷ್ಟ’ ಎಂದು ಶ್ರದ್ಧಾ ಬಣ್ಣಿಸಿದ್ದಾರೆ. ಅವರ ಖುಷಿಗೆ ಇನ್ನೊಂದು ಕಾರಣ, ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಯುತ್ತಿರುವುದು. ’ಸಾಹೊ’ ಶ್ರದ್ಧಾ ಅವರನ್ನು ಆವರಿಸಿಕೊಂಡಂತಿದೆ.

ಶ್ರದ್ಧಾ ಇಡೀ ಚಿತ್ರತಂಡದ ಮನಗೆದ್ದಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಎಲ್ಲರೊಂದಿಗೆ ಬೆರೆಯುತ್ತಿರುವ ಶ್ರದ್ಧಾ, ನಿರ್ದೇಶಕ ಸುಜೀತ್‌ ಮತ್ತು ಪ್ರಭಾಸ್‌ ಕಾಲೆಳೆಯುತ್ತಾ ಎಲ್ಲರನ್ನೂ ನಗಿಸುತ್ತಿದ್ದಾರಂತೆ. ನಿರ್ಮಾಪಕರಾದ ವಂಶಿ ಮತ್ತು ಪ್ರಮೋದ್‌ ಕೂಡಾ, ಬಿಗುಮಾನವಿಲ್ಲದ ನಟಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ.

‘ನಮ್ಮ ಚಿತ್ರಕ್ಕೆ ಶ್ರದ್ಧಾಗಿಂತ ಉತ್ತಮ ಆಯ್ಕೆ ಬೇರೆ ಇರಲಿಲ್ಲ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ ಪ್ರಭಾಸ್. ಬಾಲಿವುಡ್‌ ನಟ ನೀಲ್‌ ನಿತಿನ್‌ ಮುಖೇಶ್‌ ಕೂಡಾ ‘ಸಾಹೊ’ದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry