ಈರುಳ್ಳಿ ಕನಿಷ್ಠ ರಫ್ತು ಬೆಲೆ ಇಳಿಕೆ

7

ಈರುಳ್ಳಿ ಕನಿಷ್ಠ ರಫ್ತು ಬೆಲೆ ಇಳಿಕೆ

Published:
Updated:
ಈರುಳ್ಳಿ ಕನಿಷ್ಠ ರಫ್ತು ಬೆಲೆ ಇಳಿಕೆ

ನವದೆಹಲಿ:  ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಕೇಂದ್ರ ಸರ್ಕಾರವು ಪ್ರತಿ ಟನ್‌ಗೆ 150 ಡಾಲರ್‌ನಷ್ಟು (₹9,600) ಇಳಿಕೆ ಮಾಡಿದೆ.

ಇದರಿಂದ ಒಂದು ಟನ್‌ ಬೆಲೆ 850 ಡಾಲರ್‌ನಿಂದ (₹ 54,400) 700 ಡಾಲರ್‌ಗೆ (₹ 44,800) ಇಳಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

2015ರ ಡಿಸೆಂಬರ್‌ನಲ್ಲಿ ಈರುಳ್ಳಿ ಮೇಲಿನ ‘ಎಂಇಪಿ’ ಕೈಬಿಡಲಾಗಿತ್ತು. ಆದರೆ, ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ₹ 50 ರಿಂದ ₹ 65ರವರೆಗೂ ಏರಿಕೆ ಕಂಡಿತು. ಹೀಗಾಗಿ ಬೆಲೆ ನಿಯಂತ್ರಣ ಮತ್ತು ಮಾರುಕಟ್ಟೆಗೆ ಪೂರೈಕೆ ಪ್ರಮಾಣ ಪರಿಶೀಲಿಸಲು 2017ರ ನವೆಂಬರ್‌ನಲ್ಲಿ ಮತ್ತೆ ಜಾರಿಗೆ ತರಲಾಯಿತು. ಜನವರಿ 20ರವರೆಗೆ ಪ್ರತಿ ಟನ್‌ಗೆ 850 ಡಾಲರ್‌ ಎಂಇಪಿ ನಿಗದಿ ಮಾಡಲಾಗಿತ್ತು. ಬೆಲೆ ಸ್ಥಿರತೆ ಹಾದಿಗೆ ಮರಳುತ್ತಿರುವುದರಿಂದ ಎಂಇಪಿ ತಗ್ಗಿಸಲಾಗಿದೆ.

ಏಪ್ರಿಲ್‌–ಜುಲೈನಲ್ಲಿ 12 ಲಕ್ಷ ಟನ್‌ಗಳಷ್ಟು ಈರುಳ್ಳಿ ರಫ್ತು ಮಾಡಲಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಪ್ರಮಾಣವು ಶೇ 56 ರಷ್ಟು ಏರಿಕೆ ಕಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಉತ್ಪಾದನೆ ಆಗುವ ಈರುಳ್ಳಿಯಲ್ಲಿ ಮುಂಗಾರು ಹಂಗಾಮು ಅವಧಿಯಲ್ಲಿಯೇ ಶೇ 40 ರಷ್ಟು ಈರುಳ್ಳಿ ಉತ್ಪಾದನೆ ಆಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry