ಗೌರವ ಗಿಲ್‌ಗೆ ಪ್ರಶಸ್ತಿ

7

ಗೌರವ ಗಿಲ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಮಹೀಂದ್ರಾ ಅಡ್ವೆಂಚರ್ಸ್‌ ತಂಡದ ಗೌರವ ಗಿಲ್ ಭಾನುವಾರ ಇಲ್ಲಿ ನಡೆದ ಐದನೇ ಎಂ.ಆರ್‌.ಎಫ್–ಎಫ್‌ಎಂಎಸ್‌ಸಿಐ ಇಂಡಿಯನ್ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದರು.

55ನಿಮಿಷ,41.6 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಮೊದಲ ಸ್ಥಾನ ಗಳಿಸಿದರು. ಸಹಚಾಲಕ ಮುಸಾ ಶರಂಈಫ್ ಅವರೊಂದಿಗೆ ಶರವೇಗದಲ್ಲಿ ಕಾರು ಚಾಲನೆ ಮಾಡಿದ ಗೌರವ್ 110 ಪಾಯಿಂಟ್‌ಗಳನ್ನು ಕಲೆ ಹಾಕಿದರು. ಈ ಹಿಂದೆಯೂ ಗೌರವ್ ಮೂರು ಬಾರಿ ಈ ಪ್ರಶಸ್ತಿ ಗೆದ್ದಿದ್ದರು.

ಗೌರವ್‌ಗಿಂತ ಮೂರು ನಿಮಿಷ ತಡವಾಗಿ ಗಮ್ಯ ತಲುಪಿದ ಡೀನ್ ಮಸ್ಕರೇನಸ್ ಮತ್ತು ಶ್ರಪ್ತ್ ಪಡಿವೇಲ್ ಜೋಡಿಯು ದ್ವಿತೀಯ ಸ್ಥಾನ ಪಡೆಯಿತು. ಹಾಲಿ ಚಾಂಪಿಯನ್ ಕರ್ಣ ಕಡೂರ್ ಮೂರನೇ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry