ಬ್ಯಾಸ್ಕೆಟ್‌ಬಾಲ್‌: ಕೇರಳಕ್ಕೆ ಪ್ರಶಸ್ತಿ

7

ಬ್ಯಾಸ್ಕೆಟ್‌ಬಾಲ್‌: ಕೇರಳಕ್ಕೆ ಪ್ರಶಸ್ತಿ

Published:
Updated:

ಚೆನ್ನೈ: ಕೇರಳದ ಪುರುಷ ಮತ್ತು ಮಹಿಳಾ ತಂಡಗಳು ಇಲ್ಲಿ ಭಾನುವಾರ ಮುಕ್ತಾಯಗೊಂಡ ಸೀನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

‍ಪುರುಷರ ತಂಡ ಫೈನಲ್‌ನಲ್ಲಿ ಒಡಿಶಾ ವಿರುದ್ಧ 84–66ರಿಂದ ಗೆದ್ದಿತು. ಮಹಿಳೆಯರ ತಂಡದವರು ಮಧ್ಯಪ್ರದೇಶವನ್ನು 62–34ರಿಂದ ಗೆದ್ದು ಪ್ರಶಸ್ತಿ ಉಳಿಸಿಕೊಂಡರು.

ಪುರುಷರ ತಂಡದ ಪರವಾಗಿ ಜಿನಿ ಬೆನ್ನಿ ಮತ್ತು ಶ್ರೀರಾಗ್ ನಾಯರ್‌ ತಲಾ 18 ಪಾಯಿಂಟ್ ಕಲೆ ಹಾಕಿದರು. ಮಹಿಳಾ ತಂಡಕ್ಕೆ ಪಿ.ಎಸ್‌. ಜೀನಾ 25 ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry