ಗುಜರಾತ್‌: ಗೋವು ಪ್ರವಾಸೋದ್ಯಮ ಆರಂಭ

7

ಗುಜರಾತ್‌: ಗೋವು ಪ್ರವಾಸೋದ್ಯಮ ಆರಂಭ

Published:
Updated:

ಅಹಮದಾಬಾದ್‌: ಏಷಿಯಾ ತಳಿ ಸಿಂಹಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಗುಜರಾತ್, ಈಗ ಗೋವುಗಳಿಂದಲೂ ಪ್ರವಾಸಿಗರನ್ನು ಸೆಳೆಯಲು

ಸಜ್ಜಾಗಿದೆ. ‌

ಗುಜರಾತ್ ರಾಜ್ಯದ ಗೋವು ಸೇವಾ ಆಯೋಗ ಗೋ ಪ್ರವಾಸೋದ್ಯಮ ಆರಂಭಿಸಿದೆ. ಆಕಳುಗಳನ್ನು ಸಾಕುವುದು ಮತ್ತು ಗೋಮೂತ್ರ, ಸಗಣಿ ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವುದು ಹೇಗೆ ಎನ್ನುವುದರಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಈ ಕುರಿತು ಮಾಹಿತಿ ಒದಗಿಸಲಾಗುತ್ತದೆ. ಪ್ರವಾಸಿಗರನ್ನು ಎರಡು ದಿನಗಳ ಅವಧಿಯಲ್ಲಿ ಕೆಲವು ಅತ್ಯುತ್ತಮ ಗೋಶಾಲೆಗಳಿಗೆ ಹಾಗೂ ಗೋಮಾಳಗಳಿಗೆ ಕರೆದೊಯ್ಯಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ವಲ್ಲಭ್ ಕಠೇರಿಯಾ ತಿಳಿಸಿದ್ದಾರೆ.

‘ಗೋವುಗಳಿಂದ ಇರುವ ಆರ್ಥಿಕ ಲಾಭವನ್ನು ಜನರಿಗೆ ತಿಳಿಸಲು ಈ ಪ್ರವಾಸೋದ್ಯಮ ರೂಪಿಸಲಾಗಿದೆ. ಗೋವುಗಳ ಧಾರ್ಮಿಕ ಹಾಗೂ ಆರ್ಥಿಕ ಆಯಾಮವನ್ನು ಒಟ್ಟಾಗಿ ತಿಳಿಸುವುದು ನಮ್ಮ ಉದ್ದೇಶ’ ಎಂದು ಅವರು ಹೇಳಿದ್ದಾರೆ.

‘ಯೋಜನೆ ರೂಪಿಸಿದ ಅಲ್ಪಾವಧಿಯಲ್ಲಿಯೇ ರಾಜ್ಯದಾದ್ಯಂತ ಇಂತಹ ಹಲವು ಪ್ರವಾಸಗಳನ್ನು ಆಯೋಜಿಸಿದ್ದೇವೆ. ಆರ್ಥಿಕ ಲಾಭದ ಕುರಿತು ತಿಳಿದ ಬಳಿಕ ಹಲವು ಪ್ರವಾಸಿಗರು ಆಕಳುಗಳನ್ನು ಸಾಕಲು ಆರಂಭಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry