‘ಭಾರತದ ಮೇಲಿನ ದ್ವೇಷವನ್ನು ಪಾಕ್ ಇನ್ನೂ ಮರೆತಿಲ್ಲ’

7

‘ಭಾರತದ ಮೇಲಿನ ದ್ವೇಷವನ್ನು ಪಾಕ್ ಇನ್ನೂ ಮರೆತಿಲ್ಲ’

Published:
Updated:
‘ಭಾರತದ ಮೇಲಿನ ದ್ವೇಷವನ್ನು ಪಾಕ್ ಇನ್ನೂ ಮರೆತಿಲ್ಲ’

ಗುವಾಹಟಿ: ಪಾಕಿಸ್ತಾನದ ಮೇಲಿನ ಎಲ್ಲ ದ್ವೇಷವನ್ನು ಭಾರತ ಮರೆತಿದೆಯಾದರೂ, ಭಾರತದ ಮೇಲಿನ ದ್ವೇಷವನ್ನು ಪಾಕಿಸ್ತಾನ ಇನ್ನೂ ಮರೆತಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

ಇಲ್ಲಿ ಭಾನುವಾರ ನಡೆದ ಈಶಾನ್ಯ ರಾಜ್ಯಗಳ ಸ್ವಯಂ ಸೇವಕರನ್ನು ಉದ್ದೇಶಿಸಿ, ಅವರು ಮಾತನಾಡಿದರು. 1947ರ ಆಗಸ್ಟ್ 15ರಿಂದಲೇ ಭಾರತ ದ್ವೇಷ ಮರೆತಿದೆ. ಆದರೆ ಪಾಕಿಸ್ತಾನ ಮರೆತಿಲ್ಲ. ಇದುವೇ ಹಿಂದು ಸ್ವಭಾವ ಮತ್ತು ಇತರ ಸ್ವಭಾವಗಳ ನಡುವಿನ ವ್ಯತ್ಯಾಸ. ಹಿಂದುತ್ವ ಇರುವವರೆಗೂ ಭಾರತ ಇರುತ್ತದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry