ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್‌ ಸಮುದಾಯದ ವ್ಯಕ್ತಿಗೆ ಪೇಟ ಕಳಚುವಂತೆ ಒತ್ತಾಯ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಒಟ್ಟಾವ: ಕೆನಡಾದಕ್ಲಬ್‌ವೊಂದರಲ್ಲಿ ಸಿಖ್‌ ಸಮುದಾಯದ ವ್ಯಕ್ತಿಯನ್ನು ಮಹಿಳೆಯೊಬ್ಬರು ಜನಾಂಗೀಯ ನಿಂದನೆಗೀಡು ಮಾಡಿದ್ದಾರೆ ಎಂದು ಸಿಬಿಸಿ ವರದಿ ಮಾಡಿದೆ.

ಜಸ್ವಿಂದರ್‌ ಸಿಂಗ್‌ ಧಾಲಿವಾಲ್‌ ಜನಾಂಗೀಯ ನಿಂದನೆಗೆ ಒಳಗಾದ ವ್ಯಕ್ತಿ. ಪೇಟ ತೆಗೆಯಬೇಕು, ಇಲ್ಲದಿದ್ದರೆ ನಾನೇ ಕಿತ್ತು ಹಾಕುವುದಾಗಿ ಆ ಮಹಿಳೆ ಹೇಳಿದ್ದಾರೆ.

ಜಸ್ವಿಂದರ್‌ ತನ್ನ ಸ್ನೇಹಿತರೊಂದಿಗೆ ರಾಯಲ್‌ ಕೆನಡಿಯನ್‌ ಲೀಜನ್‌ ಕ್ಲಬ್‌ಗೆ ಬಂದಿದ್ದರು. ಇದು ಮಾಜಿ ಯೋಧರು ಸೇರಿ ನಡೆಸುತ್ತಿರುವ ಕ್ಲಬ್‌. ಇದರ ನಿಯಮಾವಳಿಗಳ ಪ್ರಕಾರ ತಲೆ ಮೇಲೆ ಯಾವುದೇ ದಿರಿಸು ಧರಿಸುವುದು ಯೋಧರಿಗೆ ತೋರುವ ಅಗೌರವ. ಆದ್ದರಿಂದ ಅಲ್ಲಿನ ಆಡಳಿತ ಜಸ್ವಿಂದರ್‌ ಅವರಿಗೆ ತಮ್ಮ ಪೇಟ ತೆಗೆಯುವಂತೆ ಸೂಚಿಸಿತು ಎಂದು ಸಿಬಿಸಿ ವರದಿ ಮಾಡಿದೆ.

ಈ ಘಟನೆಗೆ ಸಂಬಧಿಸಿದ ವಿಡಿಯೊದಲ್ಲಿ ಮಹಿಳೆ ಜಸ್ವಿಂದರ್‌ ಅವರಿಗೆ ಸಿಖ್‌ ಪೇಟ ತೆಗೆಯುವಂತೆ ಅಶ್ಲೀಲ ಆಂಗಿಕ ಸೂಚನೆ ನೀಡಿರುವುದು ಹಾಗೂ ಇಲ್ಲಿ ‘ಇದೇ ಕಾನೂನು’ ಎಂದು ಹೇಳಿರುವ ದೃಶ್ಯ ಸೆರೆಯಾಗಿದೆ.

ಕ್ಲಬ್‌ನ ಅಧ್ಯಕ್ಷ ಸ್ಟೀಫನ್‌ ಅವರು ‘ಈ ಘಟನೆಯಿಂದ ನೋವಾದವರಲ್ಲಿ ಕ್ಷಮೆ ಕೇಳಲಾಗುವುದು ಮತ್ತು ಧಾರ್ಮಿಕ ಉಡುಪು ಧರಿಸುವುದಕ್ಕೆ ಸೈನ್ಯದ ನಿಯಮಾವಳಿಗಳಲ್ಲಿ ವಿನಾಯಿತಿ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT