‘ಒಪ್ಪಿಗೆ ಇಲ್ಲದೆ ಮಹಿಳೆ ಮೈ ಮುಟ್ಟುವಂತಿಲ್ಲ’

7

‘ಒಪ್ಪಿಗೆ ಇಲ್ಲದೆ ಮಹಿಳೆ ಮೈ ಮುಟ್ಟುವಂತಿಲ್ಲ’

Published:
Updated:
‘ಒಪ್ಪಿಗೆ ಇಲ್ಲದೆ ಮಹಿಳೆ ಮೈ ಮುಟ್ಟುವಂತಿಲ್ಲ’

ನವದೆಹಲಿ: ಮಹಿಳೆಯ ಒಪ್ಪಿಗೆ ಇಲ್ಲದೆ ಯಾರೂ ಆಕೆಯ ಮೈ ಮುಟ್ಟುವಂತಿಲ್ಲ ಎಂದು ದೆಹಲಿ  ನ್ಯಾಯಾಲಯ ತಾಕೀತು ಮಾಡಿದೆ.

ಮಹಿಳೆಯ ದೇಹ ಆಕೆಯ ವಿಶೇಷ ಸ್ವತ್ತು. ಅದರ ಮೇಲೆ ಆಕೆಗಲ್ಲದೇ ಬೇರೆ ಯಾರಿಗೂ ಅಧಿಕಾರ ಇಲ್ಲ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯ ದೇಹವನ್ನು ಯಾರೂ ಸ್ಪರ್ಶಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಉತ್ತರ ಪ್ರದೇಶದ ಚಾವಿ ರಾಮ್‌ ಎಂಬ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರು, ಕಾಮುಕ ಮತ್ತು ವಿಕೃತಕಾಮಿಗಳಿಗೆ ಮಹಿಳೆ ಬಲಿಯಾಗುವುದು ನಿಂತಿಲ್ಲ ಎಂದು ವಿಷಾದಿಸಿದರು.

ಮಹಿಳೆಯ ಈ ಸ್ವಾತಂತ್ರ್ಯವನ್ನು ಪುರುಷರು ಗೌರವಿಸಬೇಕು. ಕಾಮುಕರು ಮತ್ತು ವಿಕೃತಕಾಮಿಗಳು ತಮ್ಮ ಲೈಂಗಿಕ ತೃಷೆಗೆ ಪುಟ್ಟ ಬಾಲಕಿಯರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು ಮತ್ತು ಅಮಾನವೀಯ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry