ರಾಜ್ಯದ 18 ಜಿಲ್ಲೆಗಳು ಬಯಲು ಶೌಚ ಮುಕ್ತ

7

ರಾಜ್ಯದ 18 ಜಿಲ್ಲೆಗಳು ಬಯಲು ಶೌಚ ಮುಕ್ತ

Published:
Updated:
ರಾಜ್ಯದ 18 ಜಿಲ್ಲೆಗಳು ಬಯಲು ಶೌಚ ಮುಕ್ತ

ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ (ಗ್ರಾಮೀಣ) ಅಡಿ 2017–18ನೇ ಸಾಲಿನಲ್ಲಿ ಜನವರಿ 21ರವರೆಗೆ ಕರ್ನಾಟಕದಲ್ಲಿ 12.11 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ.

ಈ ಮೂಲಕ ಕರ್ನಾಟಕವು ಬಯಲು ಶೌಚ ಮುಕ್ತ ರಾಜ್ಯವಾಗುವ ಗುರಿಯಲ್ಲಿ ಶೇ 86.72ರಷ್ಟು ಪ್ರಗತಿ ಸಾಧಿಸಿದಂತಾಗಿದೆ. ಸ್ವಚ್ಛ ಭಾರತ ಅಭಿಯಾನ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಜಾಲತಾಣದಲ್ಲಿ ಈ ಮಾಹಿತಿ ಲಭ್ಯವಿದೆ.

ನಿರ್ಮಾಣದಲ್ಲಿ ಮಹಾರಾಷ್ಟ್ರ ಮುಂದು

2017–18ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ (ನಗರ) ಅಡಿ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ ಶ್ರೇಯ ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲುತ್ತದೆ. ಮಹಾರಾಷ್ಟ್ರ ಅತಿ ಹೆಚ್ಚು ಮನೆ ಶೌಚಾಲಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದ ರಾಜ್ಯವೂ ಹೌದು

18.34 ಲಕ್ಷ 2017–18ನೇ ಸಾಲಿನಲ್ಲಿ ಗ್ರಾಮೀಣ ಮಹಾರಾಷ್ಟ್ರದಲ್ಲಿ ನಿರ್ಮಿಸಲಾದ ಶೌಚಾಲಯಗಳು

6.6 ಲಕ್ಷ 2017–18ನೇ ಸಾಲಿನಲ್ಲಿ ಮಹಾರಾಷ್ಟ್ರದ ನಗರಗಳಲ್ಲಿ ನಿರ್ಮಿಸಲಾದ ಶೌಚಾಲಯಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry