ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಕಿರುಕುಳ: ಕೇಜ್ರಿವಾಲ್‌

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಶಾಸಕರು ಅನರ್ಹಗೊಳ್ಳುತ್ತಲೇ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ತಮ್ಮ ಸರ್ಕಾರಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನಜಾಫಗಡದಲ್ಲಿ ಮಾತನಾಡಿದ ಅವರು, ಸತ್ಯದ ದಾರಿಯಲ್ಲಿ ನಡೆಯುತ್ತಿರುವವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

‘ನಾವು ಸರ್ಕಾರದ ಪ್ರತಿ ರೂಪಾಯಿಯನ್ನು ಉಳಿಸುತ್ತಿದ್ದೇವೆ. ಆದರೆ, ನಮ್ಮ ದಾರಿಯಲ್ಲಿ ಹಲವು ಕಷ್ಟಗಳು ಬರುತ್ತಿವೆ. ಎಲ್ಲ ರೀತಿಯಿಂದಲೂ ನಮಗೆ ಕಿರುಕುಳ ನೀಡಲು ಅವರು ಯತ್ನಿಸುತ್ತಿದ್ದಾರೆ. ನಮ್ಮ ಮೇಲೆ ಹಾಗೂ ಶಾಸಕರ ಮೇಲೆ ಸುಳ್ಳು ಪ್ರಕರಣ ಹೇರಿದ್ದಾರೆ’ ಎಂದು ಬಿಜೆಪಿಯನ್ನು ಉಲ್ಲೇಖಿಸದೆ ಅವರು ಆರೋಪಿಸಿದ್ದಾರೆ.

‘ನನ್ನ ಕಚೇರಿ ಮೇಲೆ ಸಿಬಿಐಯಿಂದ ಶೋಧ ನಡೆಸಿದರು. 24 ಗಂಟೆಗಳ ತಪಾಸಣೆಯ ನಂತರ ಅಲ್ಲಿ ನಾಲ್ಕು ಮಫ್ಲರ್‌ಗಳು ಮಾತ್ರ ಅವರಿಗೆ ಸಿಕ್ಕವು. ನಮ್ಮ ಶಾಸಕರನ್ನೂ ಬಂಧಿಸಲಾಯಿತು’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಕಳೆದ ಎರಡು ವರ್ಷಗಳಲ್ಲಿ ದೆಹಲಿ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಗಳಿಗೆ ಸಂಬಂಧಿಸಿದ 400 ಕಡತಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ತರಿಸಿಕೊಂಡು ಪರಿಶೀಲಿಸಿದ್ದರು. ಆದರೆ, ನಮ್ಮ ವಿರುದ್ಧ ಅವರಿಗೆ ಏನೂ ಸಿಗಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಏನೂ ಸಿಗದಿದ್ದಾಗ, ಈಗ 20 ಶಾಸಕರನ್ನು ಅನರ್ಹಗೊಳಿಸಿದ್ದಾರೆ’ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಮೂರು ವರ್ಷಗಳ ನಂತರ 20 ಶಾಸಕರು ಅನರ್ಹಗೊಳ್ಳುತ್ತಾರೆ ಎಂಬುದನ್ನು ಮನಸ್ಸಲ್ಲಿಟ್ಟುಕೊಂಡೇ ದೇವರು ಎಎಪಿಗೆ 67 ಸ್ಥಾನ ನೀಡಿದ್ದ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT