3

‘ಗೋ ಹತ್ಯೆಗೆ ಮರಣ ದಂಡನೆ ವಿಧಿಸಿ’

Published:
Updated:

ಕೋಲಾರ: ’ಗೋವಿಗೆ ತುಂಬಾ ಮಹತ್ವವಿದೆ. ಗೋ ಹತ್ಯೆ ಯಾರು ಮಾಡುತ್ತಾರೋ ಅವರಿಗೆ ಮರಣದಂಡನೆ ವಿಧಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದರು.

ತಾಲ್ಲೂಕಿನ ಗಂಗಾಪುರದಲ್ಲಿರುವ ರಾಘವೇಂದ್ರ ಗೋ ಆಶ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಯ ಗೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

’ನಮ್ಮ ಸಂವಿಧಾನದ 48ನೇ ಅನುಚ್ಛೇದ ಗೋಹತ್ಯೆ ನಿಷೇಧಕ್ಕೆ ಸೂಚಿ

ಸಿದೆ. ಇದನ್ನು ಹಿಂದೂ ಆತಂಕವಾದಿಗಳು ಸೇರಿಸಿದ್ದಲ್ಲ. ಸಂವಿಧಾನ ಶಿಲ್ಪಿಗಳು ನೀಡಿರುವ ಪರಿಚ್ಛೇದ. ಇದರಲ್ಲಿ ಹಿಂದೂ ಮುಸ್ಲಿಮರಿಗೆ ತಾರತಮ್ಯ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಹಿಂದೂಗಳೆಲ್ಲ ಒಂದಾದರೆ ಗೋ ಹತ್ಯೆ ಅದರಷ್ಟಕ್ಕೆ ಅದೇ ನಿಲ್ಲಲಿದೆ. ಮುಸ್ಲಿಮರು ಚುನಾವಣೆಗೆ ನಿಂತರೂ ಮತ ಹಾಕಿರಿ.  ಆದರೆ  ಮುಸ್ಲಿಮ್ ಅಭ್ಯರ್ಥಿ ನಮ್ಮ ಪೂರ್ವಜರೆಲ್ಲ ಹಿಂದೂಗಳು ಎಂದು ಹೇಳಬೇಕು. ಹೀಗೆ ಹೇಳಿದವರಿಗೆ ಮಾತ್ರ ಮತ ಹಾಕಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry