ಜಲ ಸಂರಕ್ಷಣೆ ಜಾಗೃತಿಗಾಗಿ ‘ನೀರಥಾನ್‌’

7

ಜಲ ಸಂರಕ್ಷಣೆ ಜಾಗೃತಿಗಾಗಿ ‘ನೀರಥಾನ್‌’

Published:
Updated:
ಜಲ ಸಂರಕ್ಷಣೆ ಜಾಗೃತಿಗಾಗಿ ‘ನೀರಥಾನ್‌’

ಬೆಂಗಳೂರು: ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸೆಂಟ್‌ ಜೋಸೆಫ್ ಕಾಲೇಜ್‌ನ (ಸ್ವಾಯತ್ತ) ವನ್ಯಜೀವಿ ಜಾಗೃತಿ ಮತ್ತು ಸಂರಕ್ಷಣೆ ಸಂಘಟನೆ (ಡಬ್ಲ್ಯುಎಸಿಸಿ) ಭಾನುವಾರ ‘ನೀರಥಾನ್‌’ ಆಯೋಜಿಸಿತ್ತು.

ನಮ್ಮ ಬೆಂಗಳೂರು ಫೌಂಡೇಷನ್‌ ಸಹಯೋಗದೊಂದಿಗೆ ನಡೆದ ಈ ಓಟದಲ್ಲಿ ಸೆಂಟ್‌ ಜೋಸೆಫ್‌ ಕಾಲೇಜಿನಿಂದ ಕಬ್ಬನ್‌ ಉದ್ಯಾನದವರೆಗೆ ವಿದ್ಯಾರ್ಥಿಗಳು ಸಾಗಿದರು. ಬಳಿಕ ಉದ್ಯಾನದ ಒಳಗಡೆಯೂ 5 ಕಿ.ಮೀ ಓಟ ಏರ್ಪಡಿಸಲಾಯಿತು.

ನೀರಿನ ಸಂರಕ್ಷಣೆ ಹಾಗೂ ಕೆರೆಗಳನ್ನು ಉಳಿಸುವ ಬಗ್ಗೆ ತಜ್ಞರು ಮಾಹಿತಿ ಹಂಚಿಕೊಂಡರು. 

ಮಾಲಿನ್ಯದಿಂದ ಬೆಳ್ಳಂದೂರು ಕೆರೆಯಲ್ಲಿ ಉಂಟಾಗಿರುವ ಬೆಂಕಿ ದುರಂತದ ಬಗ್ಗೆ ಪ್ರಸ್ತಾಪಿಸಿದ ನಮ್ಮ ಬೆಂಗಳೂರು ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್‌ ಪಬ್ಬಿಸೆಟ್ಟಿ, ‘ನಾವೆಲ್ಲರೂ ಒಟ್ಟಾಗಿ ಕೆರೆಗಳನ್ನು ಉಳಿಸಿಕೊಳ್ಳಬೇಕು. ಆಗಮಾತ್ರ ಉದ್ಯಾನ ನಗರಿ ಎಂಬ ಹಿರಿಮೆಯನ್ನು ಕಾಯ್ದುಕೊಳ್ಳಲು ಸಾಧ್ಯ’ ಎಂದರು.

ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ  ಕಾಳಜಿ ಬೆಳೆಸುವ ಡಬ್ಲ್ಯುಎಸಿಸಿಯಲ್ಲಿ  2,100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry