ಪ್ಲಾಸ್ಟಿಕ್ ಗೋದಾಮು ಭಸ್ಮ

7

ಪ್ಲಾಸ್ಟಿಕ್ ಗೋದಾಮು ಭಸ್ಮ

Published:
Updated:

ಬೆಂಗಳೂರು: ನಾಯಂಡಹಳ್ಳಿ ಜಂಕ್ಷನ್‌ ಬಳಿ ಇದ್ದ ಪ್ಲಾಸ್ಟಿಕ್ ಗೋದಾಮು ಭಾನುವಾರ ಬೆಳಿಗ್ಗೆ ಬೆಂಕಿಗೆ ಆಹುತಿಯಾಗಿದೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ಗೋದಾಮಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಐದು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

‘30X40 ಅಡಿ ವಿಸ್ತೀರ್ಣದ ಜಾಗದಲ್ಲಿ ತಗಡಿನ ಶೀಟ್‌ಗಳನ್ನು ಜೋಡಿಸಿ ಗೋದಾಮು ನಿರ್ಮಿಸಲಾಗಿತ್ತು. ಅದರಲ್ಲಿ ಹಳೇ ಪ್ಲಾಸ್ಟಿಕ್ ವಸ್ತುಗಳು, ಚಿಂದಿ ಕಾಗದಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಬೆಳಗಿನ ಜಾವ ಯಾರೋ ಗೋದಾಮಿನ ಪಕ್ಕದಲ್ಲೇ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಅದರ ಕಿಡಿಯೇ ಗೋದಾಮಿಗೆ ಬಿದ್ದಿರಬಹುದು’ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದರು.

‘ಗೋದಾಮಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೀಗಾಗಿ, ಶಾರ್ಟ್‌ ಸರ್ಕೀಟ್‌ನಿಂದ ಅವಘಡ ಸಂಭವಿಸಿಲ್ಲ ಎಂಬುದು ಸ್ಪಷ್ಟ. ಅದರ ಮಾಲೀಕರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry