ಅಪಘಾತ ರಹಿತ ಚಾಲಕರಿಗೆ ‘ಸುರಕ್ಷಾ ಚಾಲಕ’ ಬಿರುದು

7

ಅಪಘಾತ ರಹಿತ ಚಾಲಕರಿಗೆ ‘ಸುರಕ್ಷಾ ಚಾಲಕ’ ಬಿರುದು

Published:
Updated:
ಅಪಘಾತ ರಹಿತ ಚಾಲಕರಿಗೆ ‘ಸುರಕ್ಷಾ ಚಾಲಕ’ ಬಿರುದು

ಬೆಂಗಳೂರು: ಐದು ವರ್ಷಗಳ ಅವಧಿಯಲ್ಲಿ ಅಪಘಾತ ರಹಿತ ಚಾಲನೆ ಮಾಡಿದ 588 ಚಾಲಕರಿಗೆ ‘ಸುರಕ್ಷಾ ಚಾಲಕ’ ಎಂಬ ಬಿರುದಿನೊಂದಿಗೆ ಬೆಳ್ಳಿ ಪದಕ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ನಿರ್ಧರಿಸಿದೆ.

ನಿಗಮದ ಲಾಂಛನ ಒಳಗೊಂಡ 32 ಗ್ರಾಂ ಬೆಳ್ಳಿ ಪದಕ, ₹ 2,000 ನಗದು, ಪ್ರಸಂಶನಾ ಪತ್ರ ಹಾಗೂ ಮಾಸಿಕ ₹ 50 ಪ್ರೋತ್ಸಾಹ ಭತ್ಯೆ ನೀಡಲಾಗುವುದು. ಇದೇ 26ರಂದು ಆಯಾ ವಿಭಾಗಗಳಲ್ಲಿ ಪದಕ ಪ್ರದಾನ ಮಾಡಲು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಆದೇಶಿಸಿದ್ದಾರೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ರಾಮನಗರ ವಿಭಾಗದ 35 ಚಾಲಕರು, ತುಮಕೂರಿನ 32, ಕೋಲಾರ–58, ಚಿಕ್ಕಬಳ್ಳಾಪುರ–40, ಮೈಸೂರು ನಗರ–16, ಮೈಸೂರು ಗ್ರಾಮಾಂತರ–138, ಮಂಡ್ಯ–23, ಚಾಮರಾಜನಗರ–27, ಹಾಸನ–129, ಚಿಕ್ಕಮಗಳೂರು–16, ಮಂಗಳೂರು–01, ಪುತ್ತೂರು–13, ದಾವಣಗೆರೆ(ಶಿವಮೊಗ್ಗ ಸೇರಿ)– 52 ಚಾಲಕರು ಬೆಳ್ಳಿ ಪದಕಕ್ಕೆ ಆಯ್ಕೆಯಾಗಿದ್ದಾರೆ ಎಂದು ನಿಗಮ ವಿವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry