ಹಾಕಿ: ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ

7
ಬೆಲ್ಜಿಯಂಗೆ 2–1ರಲ್ಲಿ ಗೆಲುವು

ಹಾಕಿ: ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ

Published:
Updated:
ಹಾಕಿ: ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ

ತೌರಾಂಗ, ನ್ಯೂಜಿಲೆಂಡ್‌: ಭಾರತ ಪುರುಷರ ತಂಡದವರು ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಬ್ಲೇಕ್‌ ಪಾರ್ಕ್‌ನಲ್ಲಿ ಭಾನುವಾರ ನಡೆದ ಹೋರಾಟದಲ್ಲಿ ಬೆಲ್ಜಿಯಂ ತಂಡ 2–1 ಗೋಲುಗಳಿಂದ ಭಾರತವನ್ನು ಮಣಿಸಿತು.

ರೌಂಡ್‌ ರಾಬಿನ್‌ ಲೀಗ್‌ ಹಂತದಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು.

ಶುರುವಿನಿಂದಲೇ ಆಕ್ರಮಣಕಾರಿ ಆಟ ಆಡಿದ ಬೆಲ್ಜಿಯಂ ತಂಡ ನಾಲ್ಕನೇ ನಿಮಿಷದಲ್ಲಿ ಖಾತೆ ತೆರೆಯಿತು. ಟಾಮ್ ಬೂನ್‌ ಚುರುಕಾಗಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

19ನೇ ನಿಮಿಷದಲ್ಲಿ ಭಾರತದ ಮನದೀಪ್ ಸಿಂಗ್‌ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ಯಶಸ್ವಿಯಾದರು. ಹೀಗಾಗಿ ಪಂದ್ಯದಲ್ಲಿ 1–1ರ ಸಮಬಲ ಕಂಡುಬಂತು.

36ನೇ ನಿಮಿಷದಲ್ಲಿ ಸೆಬಾಸ್ಟೀನ್‌ ಡಾಕಿಯರ್‌ ಗೋಲು ದಾಖಲಿಸಿ ಬೆಲ್ಜಿಯಂ ಸಂಭ್ರಮಕ್ಕೆ ಕಾರಣರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry