ಐಎಸ್‌ಎಲ್‌: ಎಫ್‌ಸಿ ಗೋವಾಗೆ ಜಯ

7

ಐಎಸ್‌ಎಲ್‌: ಎಫ್‌ಸಿ ಗೋವಾಗೆ ಜಯ

Published:
Updated:
ಐಎಸ್‌ಎಲ್‌: ಎಫ್‌ಸಿ ಗೋವಾಗೆ ಜಯ

ಕೊಚ್ಚಿ: ಅಮೋಘ ಆಟ ಆಡಿದ ಎಫ್‌ಸಿ ಗೋವಾ ತಂಡದವರು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗೋವಾ 2–1 ಗೋಲುಗಳಿಂದ ಆತಿಥೇಯ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಸೋಲಿಸಿತು.

ವಿಜಯಿ ತಂಡದ ಫೆರಾನ್‌ ಕೊರೊಮಿನಾಸ್‌ ಏಳನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಮೂಲಕ ಲೀಗ್‌ನಲ್ಲಿ 10ನೇ ಗೋಲು ಬಾರಿಸಿದ ಸಾಧನೆ ತಮ್ಮದಾಗಿಸಿಕೊಂಡರು.

29ನೇ ನಿಮಿಷದಲ್ಲಿ ಕೇರಳ ತಂಡದ ಸಿ.ಕೆ.ವಿನೀತ್‌ ಚೆಂಡನ್ನು ಗುರಿ ಮುಟ್ಟಿಸಿ 1–1ರ ಸಮಬಲಕ್ಕೆ ಕಾರಣರಾದರು. 77ನೇ ನಿಮಿಷದಲ್ಲಿ ಗೋವಾ ತಂಡದ ಎಡು ಬೆಡಿಯಾ ಗೆಲುವಿನ ಗೋಲು ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry