ಪಾಕ್‌ ಏಕಾಂಗಿಯಾಗಿಸಲು ಯತ್ನಿಸುತ್ತಿಲ್ಲ: ಮೋದಿ

7

ಪಾಕ್‌ ಏಕಾಂಗಿಯಾಗಿಸಲು ಯತ್ನಿಸುತ್ತಿಲ್ಲ: ಮೋದಿ

Published:
Updated:
ಪಾಕ್‌ ಏಕಾಂಗಿಯಾಗಿಸಲು ಯತ್ನಿಸುತ್ತಿಲ್ಲ: ಮೋದಿ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಭಾರತ ಯತ್ನಿಸುತ್ತಿದೆ ಎಂಬ ಅಭಿಪ್ರಾಯ ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲ ರಾಷ್ಟ್ರಗಳನ್ನು ಒಗ್ಗೂಡಿಸುವ ಪ್ರಾಮಾಣಿಕ ಯತ್ನವನ್ನು ಭಾರತ ಮಾಡುತ್ತಿದೆ. ಭಾರತದ ವಿದೇಶಾಂಗ ನೀತಿ ನೆರೆಯ ಪಾಕಿಸ್ತಾನವನ್ನು ಆಧರಿಸಿಲ್ಲ. ಅದು ವಿಷಯಾಧಾರಿತವಾಗಿದೆ ಎಂದಿದ್ದಾರೆ.

’ಟೈಮ್ಸ್‌ ನೌ’ ಸುದ್ದಿವಾಹಿನಿಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿದರು.

ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ ಜನಪ್ರಿಯವಾಗಿರುವುದಿಲ್ಲ ಎಂಬ ಸುಳಿವನ್ನು ಅವರು ಇದೇ ವೇಳೆ ನೀಡಿದರು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಭಿನ್ನಮತದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮೋದಿ, ಈ ಬಿಕ್ಕಟ್ಟಿನಿಂದ ಅಂತರ ಕಾಯ್ದುಕೊಳ್ಳುವುದಾಗಿ  ಹೇಳಿದರು.

ನ್ಯಾಯಮೂರ್ತಿಗಳೇ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry