ಬಜೆಟ್‌ವರೆಗೆ ಕಾವೇರಿಗೆ ಸಾರ್ವಜನಿಕರ ಭೇಟಿ ನಿಷೇಧ

7

ಬಜೆಟ್‌ವರೆಗೆ ಕಾವೇರಿಗೆ ಸಾರ್ವಜನಿಕರ ಭೇಟಿ ನಿಷೇಧ

Published:
Updated:

ಬೆಂಗಳೂರು: 2018–19 ನೇ ಸಾಲಿನ ರಾಜ್ಯ ಬಜೆಟ್‌ (ಫೆ.16) ಮಂಡನೆಯವರೆಗೂ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಗೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ.

ಈ ಕುರಿತು ನಿವಾಸದ ಮುಂಭಾಗದಲ್ಲಿ ಫಲಕ ಹಾಕಲಾಗಿದೆ. ಭಾನುವಾರ (ಜ. 21) ಬೆಳಿಗ್ಗೆ ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ಅವರ ಮನೆಗೆ ಬಂದಿದ್ದ ಜನರು, ನಿರಾಶರಾಗಿ ಮರಳಿದರು.

‘ಬಜೆಟ್‌ ಮಂಡನೆ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ನಿಗದಿಯಾಗಿದೆ. ಸಮಯದ ಕೊರತೆಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry