ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

7

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

Published:
Updated:
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಧಾರವಾಡ : ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ. ಧಾರವಾಡದ ಜಯನಗರ ಬಡಾವಣೆಯಲ್ಲಿ ಪರಮಾನಂದ ಕೆಂಬಾವಿ(25) ಎಂಬಾತನೇ ಕೊಲೆಯಾದ ರ್ದುದೈವಿಯಾಗಿದ್ದಾನೆ.

ಪರಮಾನಂದ ಜಯನಗರ ಬಡಾವಣೆಯ ನಿವಾಸಿಯಾಗಿದ್ದು, ಈ ಕೊಲೆಯನ್ನು ಮೂವರು ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಪರಮಾನಂದ, ಬೀದಿ ಬದಿಯ ಎಗ್ ರೈಸ್ ಅಂಗಡಿ ಇಟ್ಡುಕೊಂಡಿದ್ದ. ಭಾನುವಾರ ಮಧ್ಯರಾತ್ರಿ ಅಂಗಡಿಗೆ ಬಂದ ಮೂವರಿಂದ ಆರಂಭಗೊಂಡ ಜಗಳ ಅತಿರೇಕಕ್ಕೆ ತಿರುಗಿ ಪರಮಾನಂದನ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry