ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯದೇವನಿಗೆ ಸಾವಿರ ನಮಸ್ಕಾರ

Last Updated 22 ಜನವರಿ 2018, 6:49 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ ಎಸ್‍ಪಿವೈಎಸ್‍ಎಸ್ ವತಿಯಿಂದ ನಡೆದ `ಆರೋಗ್ಯಕ್ಕಾಗಿ ಸೂರ್ಯನಮಸ್ಕಾರ' ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

ಮುಂಜಾನೆ 5.30ಕ್ಕೆ ಪ್ರಾರ್ಥ ನೆಯೊಂದಿಗೆ ನಿತ್ಯಾಭ್ಯಾಸ ಆರಂಭ ಗೊಂಡು, 500ಕ್ಕೂ ಅಧಿಕ ಯೋಗ ಶಿಕ್ಷಕರು ಸಾರ್ವಜನಿಕರಿಗೆ ಸೂರ್ಯ ನಮಸ್ಕಾರದ ಪಾಠ ಮಾಡಿದರು. ಅಲ್ಲದೆ ಅದರ ಮಹತ್ವವನ್ನು ಹೇಳಿಕೊಟ್ಟರು. 6.30ರಿಂದ ಸಾರ್ವಜನಿಕರು ಮತ್ತು ಯೋಗಬಂಧುಗಳ ಸಹಯೋಗದಲ್ಲಿ ಸೂರ್ಯನಮಸ್ಕಾರ ಆರಂಭವಾಯಿತು. ಸೇರಿದ ಸಹಸ್ರಾರು ಮಂದಿ ಶಿಸ್ತು, ಬದ್ಧತೆಯಿಂದ ಸೂರ್ಯನಮಸ್ಕಾರ ಮಾಡುವ ಆ ದೃಶ್ಯ ಕಣ್ಣಿಗೆ ಹಬ್ಬವಾಗಿತ್ತು.  7.30 ರ ತನಕ ಸೂರ್ಯನಮಸ್ಕಾರ ನಡೆದು ಬಳಿಕ ಎಲ್ಲರಿಗೂ ಲಘು ಉಪಾ ಹಾರ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಯಿತು. ಮಂಗಳಾ ಕ್ರೀಡಾಂಗಣವನ್ನು ಎಲ್ಲ ಯೋಗಬಂಧುಗಳು ಬರಿಗಾಲಿನಲ್ಲೇ ಪ್ರವೇಶಿಸಿದರು. ಎಲ್ಲರೂ ಹಳದಿ ಟೀಶರ್ಟ್‌ ಧರಿಸಿದ್ದರು.

ಕಲಾ ಸಂಘಟಕ ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಶಾರದಾ ಕಾಲೇಜು ಪ್ರಿನ್ಸಿಪಾಲ್ ದಯಾನಂದ್ ಕಟೀಲು, ಪತಂಜಲಿ ವಿದ್ಯಾಪೀಠದ ಕರ್ನಾಟಕ ರಾಜ್ಯ ಮುಖ್ಯಸ್ಥ ಡಾ. ಜ್ಞಾನೇಶ್ವರ್ ನಾಯಕ್‌, ರವೀಶ್ ಕುಮಾರ್, ಜಿಲ್ಲಾ ಸಂಚಾಲಕ ಹರೀಶ್ ಅಣ್ಣ, ಜಿಲ್ಲಾ ವ್ಯವಸ್ಥಾ ಪ್ರಮುಖ್ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT