‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

7

‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

Published:
Updated:
‘ರಾಜಕೀಯ’ಕ್ಕೆ ನಾಗರಿಕರ ಆಕ್ರೋಶ

ಬಂಟ್ವಾಳ: ‘ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಿ-ಪುಂಚೋಡಿ ಸಂಪರ್ಕ ರಸ್ತೆಯು  10 ವರ್ಷಗಳಿಂದ ಡಾಂಬರು ಕಾಣದೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಯಲ್ಲಿ ಬಹುತೇಕ ಮಣ್ಣು ಮತ್ತು ಎಲ್ಲೆಡೆ ಹರಡಿಕೊಂಡ ಜೆಲ್ಲಿ ಮಾತ್ರ ಕಾಣಿಸುತ್ತಿದೆ.  ಸಚಿವ ಬಿ.ರಮಾನಾಥ ರೈ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಇವರಿಗೆ  ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ, ಕಳೆದ ವರ್ಷ ನಡೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ತಂಡಗಳು ನೀಡಿದ್ದ ಪ್ರತ್ಯೇಕ ಭರವಸೆ ಇದೀಗ ಹುಸಿಯಾಗಿದೆ’ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ಗೆ ಮತ ನೀಡಿದರೆ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಸಚಿವರಾಗುವುದು ಖಚಿತ. ಆಗ ನಿಮ್ಮ ರಸ್ತೆ ಸಂಪೂರ್ಣ ಡಾಂಬರೀಕ ರಣಗೊಳಿಸುತ್ತೇವೆ ಎಂದಿದ್ದರು.  ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಗೆದ್ದರೆ ಶಾಸಕರ ಅನುದಾನದ ಜೊತೆಗೆ ಸಂಸದ ನಳಿನ್ ಕುಮಾರ್ ಅವರ ಅನುದಾನವನ್ನೂ ಬಳಸಿಕೊಂಡು ರಾಯಿ-ಪುಂಚೋಡಿ ಸಂಪರ್ಕ ರಸ್ತೆ ಡಾಂಬರೀಕರಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಾಲ್ಕು ವರ್ಷ ಪೂರೈಸಿದ್ದಾರೆ. ಆದರ ಭರವಸೆ ನಡೆಸಿಲ್ಲ’ ಎಂದು ಜನರು ದೂರಿದ್ದಾರೆ.

ಕಾಂಗ್ರೆಸಿಗರು ಸಚಿವ ಬಿ.ರಮಾ ನಾಥ ರೈ ಅವರ ಅನುದಾನ ತರುವ ಭರವಸೆ ನೀಡಿದ್ದರೆ, ಬಿಜೆಪಿ ಕಾರ್ಯ ಕರ್ತರು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅನು ದಾನ ತರುವ ಭರವಸೆ ನೀಡಿದ್ದಾರೆ. ಇದರಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಕಾಂಗ್ರೆಸ್‌ನ ಮಂಜುಳಾ ಸದಾನಂದ  ಆಯ್ಕೆಗೊಂಡರೆ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಬಿಜೆಪಿ ಮುಖಂಡ ಎಂ.ತುಂಗಪ್ಪ ಬಂಗೇರ ಆಯ್ಕೆಗೊಂಡಿದ್ದಾರೆ. ಈ ರಸ್ತೆ ದುರಸ್ತಿಗೆ ಜಿಲ್ಲಾ ಪಂಚಾಯಿತಿನಿಂದ₹ 5ಲಕ್ಷ ಮೊತ್ತದ ಅನುದಾನ ಮೀಸಲಿ ಟ್ಟರೂ ಗುತ್ತಿಗೆದಾರರ ಆಯ್ಕೆಗೆ ಸಂಬಂಧಿ ಸಿದಂತೆ ಮೀಸಲಾತಿ ಯೋಜನೆಯಡಿ ಅಡ್ಡಿಯಾಗಿದೆ’ ಎಂದಿದ್ದಾರೆ.

ಎಂಟು ತಿಂಗಳ ಹಿಂದೆಯಷ್ಟೇ ಇದೇ ರಸ್ತೆಯ ಒಂದು ಭಾಗದಲ್ಲಿ ಅಮ್ಯಾಲು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಯೋಜನೆಯಡಿ ₹20 ಲಕ್ಷ ಅನುದಾನದಲ್ಲಿ ಒಟ್ಟು 490 ಮೀ.ಉದ್ದಕ್ಕೆ ರಸ್ತೆ ಕಾಂಕ್ರಿಟೀ ಕರಣಗೊಳಿಸಲಾಗಿದೆ. ಇನ್ನೊಂದೆಡೆ ಇಲ್ಲಿನ ದಾಜಿಮಾರು ಎಂಬಲ್ಲಿ ಕೂಡಾ ಗ್ರಾಮ ವಿಕಾಸ ಯೋಜನೆಯಡಿ

₹5.25ಲಕ್ಷ ವೆಚ್ಚದಲ್ಲಿ ಸ್ವಲ್ಪ ಭಾಗ ಕಾಂಕ್ರಿಟೀಕರಣ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ರಾಯಿ ಪೇಟೆಯಿಂದ ಪೂಜಾರ್ತೋಡಿ ರಸ್ತೆಯಲ್ಲಿ ಮಾತ್ರ ಪಾದಚಾರಿಗಳು ಮತ್ತು ವಾಹನ ಸಂಚಾರ ತೀರಾ ತ್ರಾಸದಾಯಕವಾಗಿದೆ ಎಂಬ ಅಳಲು ನಾಗರಿಕರಿಂದ ಕೇಳಿ ಬಂದಿದೆ.

ಹಣ ನೀಡಿದ್ದಾರೆ: ‘ಲೋಕಸಭಾ ಚುನಾ ವಣೆ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ₹ 3ಲಕ್ಷ ವೆಚ್ಚದ ಅನುದಾನ, ಕಳೆದ ಎರಡೂವರೆ ವರ್ಷಗಳ ಹಿಂದೆ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯೆ ನಳಿನಿ ಬಿ.ಶೆಟ್ಟಿ ಅವರು ₹ 5ಲಕ್ಷ ವೆಚ್ಚದಲ್ಲಿ ರಾಯಿ-ಕೈತ್ರೋಡಿ ಮತ್ತು ರಾಯಿ-ಬದನಡಿ ರಸ್ತೆಗೆ ತೇಪೆ ಡಾಂಬರೀಕರಣಗೊಳಿಸಿದ್ದಾರೆ. 9 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿ. ಕೆ.ಸಂತೋಷ್ ಕುಮಾರ್ ಭಂಡಾರಿ ಅವರು ₹ 10ಲಕ್ಷ ವೆಚ್ಚದಲ್ಲಿ ರಾಯಿ-ಪೂಜಾರ್ತೋಡಿ ರಸ್ತೆಗೆ ಡಾಂಬರೀಕರಣಗೊಳಿಸಿದ್ದಾರೆ’ ಎಂದು ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿ 'ರಾಜಕೀಯ'ಕ್ಕೆ ಇಲ್ಲಿನ ಸರ್ಕಾರಿ ಪ್ರಾಥ ಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಕೈತ್ರೋಡಿ ಕೊರಗಜ್ಜ ಕ್ಷೇತ್ರಕ್ಕೆ ಪ್ರತಿದಿನ ತೆರಳುವ ವಾಹನ ಮತ್ತು ಪಾದಚಾರಿಗಳ ತೊಳ ಲಾಟ ಮಾತ್ರ ರಾಜಕಾರಣಿಗಳಿಗೆ ಕಾಣಿ ಸುತ್ತಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಬ್ಯಾನರ್ ಅಳವಡಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಇದೇ ಬರುವ ಫೆ.6ರಂದು ಇಲ್ಲಿನ ಕೈತ್ರೋಡಿ ಕ್ವಾರ್ಟರ್ಸ್‌ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಇದರ 'ಬೆಳ್ಳಿಹಬ್ಬ' ಪ್ರಯುಕ್ತ ಕಟೀಲು ಮೇಳದ 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ನಡೆ ಯಲಿದ್ದು, ಇದಕ್ಕೂ ಮೊದಲು ರಸ್ತೆ ಡಾಂಬ ರೀಕಣಗೊಳಸಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry