ಕಲ್ಲಿದ್ದಲು ಸಾಗಣೆ; ಸಂಚಾರ ಸಂಕಟ

7

ಕಲ್ಲಿದ್ದಲು ಸಾಗಣೆ; ಸಂಚಾರ ಸಂಕಟ

Published:
Updated:

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ (ಆರ್‌ಟಿಪಿಎಸ್) ವೈಟಿಪಿಎಸ್‌ಗೆ ಟಿಪ್ಪರ್‌ ಮೂಲಕ ಕಲ್ಲಿದ್ದಲು ಸಾಗಣೆ ನಿಯಮ ಉಲ್ಲಂಘಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುತ್ತಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ ಎಂಬುದು ಸ್ಥಳೀಯರ ಆರೋಪ.

ರಾಯಚೂರು –ಹೈದರಾಬಾದ್ ಮುಖ್ಯ ರಸ್ತೆಯಲ್ಲಿ ಟ್ಯಾಂಕರ್‌ಗಳು ಓವರ್ ಲೋಡ್ ಕಲ್ಲಿದ್ದಲು ತುಂಬಿಕೊಂಡು ಬರುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚಾರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಲಾಭಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿನ ಕಲ್ಲಿದ್ದಲು ಸಾಗಣೆ ಮಾಡುತ್ತಿರುವುದರಿಂದ ರಸ್ತೆಗಳು ಹದಗೆಟ್ಟಿದ್ದು, ಬೈಕ್‌ ಸವಾರರ ಕಣ್ಣಿಗೆ ಬೂದಿ ಬಿದ್ದು ಅಪಘಾತಗಳು ಸಂಭವಿಸುತ್ತಿವೆ.

ಒಂದು ಟಿಪ್ಪರ್‌ ವಾಹನದ ಮೂಲಕ 18 ರಿಂದ 20 ಟನ್‌ರಷ್ಟು ಕಲ್ಲಿದ್ದಲು ಒಯ್ಯುಬೇಕು. ಇದಕ್ಕಿಂತ ಹೆಚ್ಚಿನ ಟನ್‌ ಕಲ್ಲಿದ್ದಲು ಲೋಡ್‌ಮಾಡಿಕೊಂಡು ಹೋಗುತ್ತಿದ್ದಾರೆ. ಯರಮರಸ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ವೈಟಿಪಿಎಸ್‌) ನಿಯಮ ಪ್ರಕಾರ ಆರ್‌ಟಿಪಿಎಸ್‌ನಿಂದ ಕಲ್ಲಿದ್ದಲು ಪಡೆದುಕೊಳ್ಳಬೇಕು.

ದಿನಕ್ಕೆ 4000 ಟನ್‌ ರಷ್ಟು ಕಲ್ಲಿದ್ದಲು ಟಿಪ್ಪರ್‌ ಚಾಲಕರು, ಮಾಲೀಕರು ತೆಗೆದುಕೊಂಡು ಹೋಗಬೇಕು. ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ನಿಯಮ ಪ್ರಕಾರ ವೈಟಿಪಿಎಸ್‌ಗೆ ಕಲ್ಲಿದ್ದಲು ತರಬೇಕು. ನಿಯಮಗಳನ್ನು ಮೀರಿ ಕಲ್ಲಿದ್ದಲು ಸಾಗಣೆ ಮಾಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರ್‌ಟಿಒ ಅಧಿಕಾರಿ ದಾಮೋದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಓವರ್‌ಲೋಡ್‌ ಕಲ್ಲಿದ್ದಲು ಅನ್ನು ಒಯ್ಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರ ಕಾರ್ಯಚರಣೆ ನಡೆಸಲಾಗುವುದು

ದಾಮೋದರ್‌ ಅಧಿಕಾರಿ, ಪ್ರಾದೇಶಿಕ ಸಾರಿಗೆ ಸಂಸ್ಥೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry