₹ 2. 63 ಕೋಟಿ ಕಾಮಗಾರಿಗೆ ಚಾಲನೆ

7

₹ 2. 63 ಕೋಟಿ ಕಾಮಗಾರಿಗೆ ಚಾಲನೆ

Published:
Updated:

ಕನಕಗಿರಿ: ಹುಲಸನಹಟ್ಟಿ ಗ್ರಾಮದಿಂದ ಅಡವಿಬಾವಿ ಚಿಕ್ಕತಾಂಡದ ವರೆಗೆ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ₹ 1. 40 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು.

ಹುಲಿಹೈದರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಆಕಳಕುಂಪಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಹುಲಸನಹಟ್ಟಿ– ಅಡವಿಬಾವಿ ಚಿಕ್ಕ ತಾಂಡದ ರಸ್ತೆ ನಿರ್ವಹಣೆ ಹಾಗೂ ಮರು ಡಾಂಬರೀಕರಣ ₹ 29.23 ಲಕ್ಷ ಅನುದಾನ ಇದೆ, ರಸ್ತೆ ವಿಸ್ತರಣೆ ಸಮಯದಲ್ಲಿ ಗ್ರಾಮಸ್ಥರು ಸಹಕರಿಸಬೇಕು’ ಎಂದರು.

ಹುಲಸನಹಟ್ಟಿ ಗ್ರಾಮದ ಎಸ್‌ಸಿ ಕಾಲೊನಿಯಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಕಾಮಕಾರಿಗೆ ₹ 15 ಲಕ್ಷ, ತಿಪ್ಪನಾಳ ಗ್ರಾಮದ ಎಸ್‌ಸಿ ಕಾಲೊನಿಯ ಸಿಮೆಂಟ್ ಕಾಂಕ್ರಿಟ್ ರಸ್ತೆಗೆ ₹15 ಲಕ್ಷ, ಬೆನಕನಾಳ ಗ್ರಾಮದ ಸಿಮೆಂಟ್ ಕಾಂಕ್ರಿಟ್ ರಸ್ತೆಗೆ ₹ 12. 88 ಲಕ್ಷ , ವರ್ನ್‌ಖೇಡ, ಹನುಮನಾಳ ಹಾಗೂ ಕನಕಾಪುರ ಗ್ರಾಮದ ಎಸ್‌ಸಿ ಕಾಲೊನಿಯ ಸಿಸಿ ರಸ್ತೆಗೆ ₹ 60 ಲಕ್ಷ, ಅಡವಿಬಾವಿ ದೊಡ್ಡತಾಂಡದ ಕಾಲೊನಿಯಲ್ಲಿ ₹ 15 ಲಕ್ಷ, ಆಕಳಕುಂಪಿ ಎಸ್‌ಟಿ ಕಾಲೊನಿಯಲ್ಲಿ ಸಿಸಿ ರಸ್ತೆಗೆ ₹ 20 ಲಕ್ಷ ಸೇರಿದಂತೆ ಹುಲಿಹೈದರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಒಟ್ಟು ₹ 2. 63 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದರು.

ಕಳೆದ ಎರಡು ವರ್ಷಗಳಿಂದಲೂ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಿಲ್ಲ ಮತ್ತೆ ಯಾವಾಗ ಆರಂಭಿಸುತ್ತೀರಿ ಎಂದು ಬೆನಕನಾಳ ಗ್ರಾಮಸ್ಥರು ದೂರಿದರು. ಗುತ್ತಿಗೆ ಪಡೆದ ಸಂಸ್ಥೆಯ ಗುತ್ತಿಗೆದಾರರಿಗೆ ಹಿಗ್ಗಾಮಗ್ಗ ತರಾಟೆಗೆ ತೆಗೆದುಕೊಂಡ ತಂಗಡಗಿ ವಾರದೊಳಗೆ ಘಟಕ ಆರಂಭಿಸಿ ನೀರು ಪೊರೈಸಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಲಕ್ಷ್ಮವ್ವ ನೀರ್ಲೂಟಿ, ಜಿಪಂ ಶಿಕ್ಷಣ ಹಾಗು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ಸದಸ್ಯ ಅಮೇರೇಶ ಗೋನಾಳ, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ತಾಪಂ ಅಧ್ಯಕ್ಷ ವಿರೂಪಾಕ್ಷಗೌಡ ಪಾಟೀಲ, ಉಪಾಧ್ಯಕ್ಷ ಕನಕಪ್ಪ ತಳವಾರ, ಸದಸ್ಯರಾದ ಭೀಮಮ್ಮ ರಾಮನಗೌಡ, ಮಲ್ಲಿಕಾರ್ಜುನಗೌಡ, ಶಿವಮ್ಮ ಚವ್ಹಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಕುಂಟೆಪ್ಪ, ಶೇಖಮ್ಮ ಸಿಂಗ್ರಿ, ಅಮರಮ್ಮ ಗೋಸ್ಲೆಪ್ಪ ಗದ್ದಿ, ಎಪಿಎಂಸಿ ನಿರ್ದೇಶಕರಾದ ರಾಮಚಂದ್ರ ನಾಯಕ, ಶಿವಶಂಕ್ರಪ್ಪ ಚನ್ನದಾಸರ, ಗುತ್ತಿಗೆದಾರ ವೆಂಕೋಬ ಒಡೆಯರ್ ಪ್ರಮುಖರಾದ ವೀರೇಶ ಸಮಗಂಡಿ, ಹನುಮಂತಪ್ಪ ಶಿರೂರು, ಮಲ್ಲಿಕಾರ್ಜುನಗೌಡ ಗುಂಡೂರು, ಶರಣೆಗೌಡ ನಾಯಕ, ಪಿಡಿಓ ಮೆಹಬೂಬಸಾಬ ಇದ್ದರು.

* * 

ಪ್ರತಿ ಗ್ರಾಮಗಳಲ್ಲಿಯೂ ಶುದ್ದ ಕುಡಿಯುವ ನೀರು ಪೊರೈಕೆ, ಸಿಸಿ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ.

ಶಾಂತಾ ರಮೇಶ ನಾಯಕ, ಅಧ್ಯಕ್ಷೆ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry