ಗುಜರಾತ್‌ ಸರಣಿ ಸ್ಪೋಟದ ರೂವಾರಿ ಅಬ್ದುಲ್‌ ಸುಭಾನ್‌ ಖುರೇಷಿ ಬಂಧನ

7

ಗುಜರಾತ್‌ ಸರಣಿ ಸ್ಪೋಟದ ರೂವಾರಿ ಅಬ್ದುಲ್‌ ಸುಭಾನ್‌ ಖುರೇಷಿ ಬಂಧನ

Published:
Updated:
ಗುಜರಾತ್‌ ಸರಣಿ ಸ್ಪೋಟದ ರೂವಾರಿ ಅಬ್ದುಲ್‌ ಸುಭಾನ್‌ ಖುರೇಷಿ ಬಂಧನ

ನವದೆಹಲಿ: ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ಬೇಕಾಗಿದ್ದ ಭಯೋತ್ಪಾದಕ ಅಬ್ದುಲ್‌ ಸುಭಾನ್‌ ಖುರೇಷಿಯನ್ನು ಸೋಮವಾರ ಬಂಧಿಸಿರುವುದಾಗಿ ದೆಹಲಿ ಪೊಲೀಸರು ಹೇಳಿದರು.

ಬಂಧನದ ವೇಳೆ ಖುರೇಷಿ ಮತ್ತು ಪೊಲೀಸರ ನಡುವೆ ಕೆಲಕಾಲ ಗುಂಡಿನ ಚಕಮಕಿಯೂ ನಡೆದಿದೆ.

‘2008ರಲ್ಲಿ ಗುಜರಾತ್‌ನಲ್ಲಿ ನಡೆದ ಸರಣಿ ಬಾಂಬ್‌ ಸ್ಪೋಟಗಳಲ್ಲಿ ಬಂಧಿತ ಪ್ರಮುಖ ಪಾತ್ರ ವಹಿಸಿದ್ದ’ ಎಂದು ದೆಹಲಿ ಪೊಲೀಸ್‌ನ(ವಿಶೇಷ ವಿಭಾಗ) ಡಿಸಿಪಿ ಪಿ.ಎಸ್‌.ಕುಶ್ವಾಹ ಹೇಳಿದರು.

‘ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಸ್ಥಾಪಕ ಹಾಗೂ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಭಯೋತ್ಪಾದಕ ಅಬ್ದುಲ್‌ ಸುಭಾನ್‌ ಖುರೇಷಿಯನ್ನು ನಾವು ಬಂಧಿಸಿದ್ದೇವೆ. ಈತ ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ನೇಪಾಳದಲ್ಲಿ ನೆಲೆಸಿದ್ದ. ಸಂಘಟನೆಯನ್ನು ಮತ್ತೆ ಬಲಪಡಿಸಲು ಪ್ರಯತ್ನಿಸುತ್ತಿದ್ದ’ ಎಂದು ಕುಶ್ವಾಹ ತಿಳಿಸಿದರು.

ಖುರೇಷಿಯ ಊರು ಮಧ್ಯಪ್ರದೇಶದ ರಾಮ್‌ಪುರ. ಈ ಹಿಂದೆ ಈತ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ(ಸಿಮಿ)ದಲ್ಲಿ ಸಕ್ರಿಯನಾಗಿದ್ದ.

ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಈತನ ಕೈವಾಡ ಇತ್ತು. ಇವನ ಕುರಿತು ಮಾಹಿತಿ ನೀಡಿದವರಿಗೆ ₹ 4 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ತನ್ನ ಗುರುತನ್ನು ಮರೆಮಾಚಲು ಇವನು ಅಬ್ದುಲ್‌ ಸುಭಾನ್‌ ಉಸ್ಮಾನ್‌ ಖುರೇಷಿ, ಕಾಸಿಂ, ಝಾಕಿರ್‌, ಕ್ವಾಬ್‌ ಮತ್ತು ತೌಖೀರ್‌ ಎಂಬ ಹೆಸರಿನಿಂದ ಪರಿಚಯಿಸಿಕೊಳ್ಳುತ್ತಿದ್ದನಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry