ಪದ್ಮಾವತ್ ಅಲ್ಲ, ಅತ್ಯಾಚಾರ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿ

7

ಪದ್ಮಾವತ್ ಅಲ್ಲ, ಅತ್ಯಾಚಾರ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿ

Published:
Updated:
ಪದ್ಮಾವತ್ ಅಲ್ಲ, ಅತ್ಯಾಚಾರ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿ

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಪದ್ಮಾವತ್ ಚಿತ್ರಕ್ಕೆ ನಿಷೇಧ ಹೇರಬೇಕೆಂದು ಒತ್ತಾಯ ಕೇಳಿ ಬರುತ್ತಿರುವಾಗಲೇ ನಟಿ ರೇಣುಕಾ ಶಹಾನೆ ಅತ್ಯಾಚಾರ ಮತ್ತು ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ದನಿಯೆತ್ತಿದ್ದಾರೆ.

ಪದ್ಮಾವತ್ ಚಿತ್ರವನ್ನು ನಿಷೇಧಿಸಿ ಎಂದು ಕರಣೀ ಸೇನೆ ಮತ್ತು ಬಲ ಪಂಥೀಯ ಸಂಘಟನೆಯೊಂದು ಒತ್ತಾಯಿಸುತ್ತಿದ್ದು, ಸಿನಿಮಾ ಬಿಡುಗಡೆ ಮಾಡಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

ಈ ನಡುವೆ ನಟಿ ರೇಣುಕಾ ಶೆಹಾನೆ, ಅತ್ಯಾಚಾರವನ್ನು ನಿಷೇಧಿಸಿ, ಲೈಂಗಿಕ ದೌರ್ಜನ್ಯವನ್ನು ನಿಷೇಧಿಸಿ, ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿ ಎಂದು ಬರೆದ  ಪ್ಲಕಾರ್ಡ್ ಹಿಡಿದು ಫೇಸ್‍ಬುಕ್  ಪೋಸ್ಟ್ ನಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ರೇಣುಕಾ ಅವರ ಈ ಪೋಸ್ಟ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಪೋಸ್ಟ್  4,557 ಬಾರಿ ಶೇರ್ ಆಗಿದ್ದು, 5 ಸಾವಿರಕ್ಕಿಂತಲೂ ಹೆಚ್ಚು ಲೈಕ್ ಗಿಟ್ಟಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry