ಸಮಾಜದ ಬದಲಾವಣೆ ಮನೆಯಿಂದ ಮಾತ್ರ ಸಾಧ್ಯ: ಕಿರಣ್ ಖೇರ್

7
ಹರಿಯಾಣ ಅತ್ಯಾಚಾರ ಪ್ರಕರಣ ಉಲ್ಲೇಖಿಸಿ ಮಾತು

ಸಮಾಜದ ಬದಲಾವಣೆ ಮನೆಯಿಂದ ಮಾತ್ರ ಸಾಧ್ಯ: ಕಿರಣ್ ಖೇರ್

Published:
Updated:
ಸಮಾಜದ ಬದಲಾವಣೆ ಮನೆಯಿಂದ ಮಾತ್ರ ಸಾಧ್ಯ: ಕಿರಣ್ ಖೇರ್

ಚಂಡೀಗಡ: ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಮಾಜದಲ್ಲಿನ‌ ಬದಲಾವಣೆ ಮೊದಲು ಮನೆ ಮತ್ತು ಮನಸ್ಸಿನಿಂದಲೇ ಪ್ರಾರಂಭವಾಗಬೇಕು ಎಂದು ಬಿಜೆಪಿ ಸಂಸದೆ ಕಿರಣ್ ಖೇರ್ ಎಂದು ಹೇಳಿದ್ದಾರೆ.

ಕಳೆದ ಎರಡು ವಾರದಿಂದ ಹರಿಯಾಣದಲ್ಲಿ ನಿರಂತರವಾಗಿ ದಾಖಲಾಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ ಕಿರಣ್ ಖೇರ್, ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದಾದರೆ ಮೊದಲು ಜನರ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹರಿಯಾಣದಲ್ಲಿ ಕಳೆದ ಎಂಟು ದಿನಗಳಲ್ಲಿ ಎಂಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಿಂದ ‘ಹರಿಯಾಣ ದೇಶದ ಅತ್ಯಾಚಾರ ಪ್ರಕರಣಗಳ ರಾಜ್ಯ’ ಎಂದು ಕಾಂಗ್ರೆಸ್ ಕರೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry