ಮಾನವ ಮಂಗನಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ: ಪ್ರಕಾಶ್ ರೈ

7

ಮಾನವ ಮಂಗನಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ: ಪ್ರಕಾಶ್ ರೈ

Published:
Updated:
ಮಾನವ ಮಂಗನಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ: ಪ್ರಕಾಶ್ ರೈ

ಬೆಂಗಳೂರು: ಮಂಗನಿಂದ ಮಾನವನಾಗುವುದನ್ನು ನಮ್ಮ ಹಿರಿಯರು ನೋಡಿಲ್ಲ ಅಂತಾರೆ ಸಚಿವರು. ಆದರೆ ಪ್ರೀತಿಯ ಸರ್, ಹಳೆಯದನ್ನು ಕೆದಕುತ್ತಾ ನಮ್ಮನ್ನು ಶಿಲಾಯುಗಕ್ಕೆ ಕರೆದೊಯ್ಯುವ ಮೂಲಕ ಮಾನವ ಮಂಗನಾಗುವ ವ್ಯತಿರಿಕ್ತ ಪ್ರಕ್ರಿಯೆಗಳನ್ನು ನಾವು ನೋಡುತ್ತಿದ್ದೇವೆ ಎಂಬುದನ್ನು ನಿರಾಕರಿಸುತ್ತೀರಾ? ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಮಂಗನಿಂದ ಮಾನವ ಆಗುವುದನ್ನು ನಮ್ಮ ಹಿರಿಯರು ನೋಡಿದ್ದಾರೆಯೇ? ಹಾಗಾಗಿ ಡಾರ್ವಿನ್‍ನ ವಿಕಾಸ ಸಿದ್ಧಾಂತ ತಪ್ಪು ಎಂದು ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಹೇಳಿದ್ದರು, ಸತ್ಯಪಾಲ್ ಸಿಂಗ್ ಅವರ ಈ ಹೇಳಿಕೆಗೆ ಪ್ರಕಾಶ್ ರೈ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

[Related]

ಶುಕ್ರವಾರ ಔರಂಗಾಬಾದ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಸಿಂಗ್‌, ಮಂಗ ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ನೋಡಿದ್ದೇವೆ ಎಂದು ನಮ್ಮ ಪೂರ್ವಿಕರು ಲಿಖಿತ ಅಥವಾ ಮೌಖಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ನಾವು ಓದಿದ ಪುಸ್ತಕದಲ್ಲಿ ಅಥವಾ ನಮ್ಮ ಹಿರಿಯರು ನಮಗೆ ಹೇಳಿದ ಕಥೆಗಳಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ಚಾರ್ಲ್ಸ್ ಡಾರ್ವಿನ್‌ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ಸರಿ ಇಲ್ಲ. ಆದ್ದರಿಂದ ಶಾಲೆ ಹಾಗೂ ಕಾಲೇಜುಗಳ ಪಠ್ಯಕ್ರಮದಲ್ಲಿ ಅದನ್ನು ಬದಲಾಯಿಸುವ ಅಗತ್ಯವಿದೆ. ಮಾನವ ಭೂಮಿ ಮೇಲೆ ಕಾಣಿಸಿಕೊಂಡಂದಿನಿಂದ ಮಾನವನಾಗಿಯೇ ಇದ್ದಾನೆ ಎನ್ನುವ ಮೂಲಕ ಡಾರ್ವಿನ್ ಸಿದ್ಧಾಂತ ತಪ್ಪು ಎಂದು ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry